ಬೆಂಗಳೂರು: ಚಪ್ಪಾಳೆ ತಟ್ಟುತ್ತಾರೆ ಎನ್ನುವ ಮನಸ್ಥಿಯಲ್ಲಿ ವೇದಿಕೆ ಮೇಲೆ ಪ್ರಕಾಶ್ ರಾಜ್ ಹುಚ್ಚುಚ್ಚಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕಾಶ್ ರಾಜ್ ನಟರಾಗಿ ಮುಂದುವರಿದರೆ ಒಳ್ಳೆಯದು. ಇಲ್ಲದೇ ಇದ್ದರೆ ಪಕ್ಷ ಹುಟ್ಟು ಹಾಕಿ ಮುಂದುವರಿಯಲಿ. ರಾಜ್ಯದಲ್ಲಾಗಿರುವ ದುರಂತಕ್ಕೆ ಪ್ರಧಾನಿ ಮೋದಿಯವರು ಏನೂ ಮಾಡಿಲ್ಲ ಎನ್ನುವುದು ಸರಿಯಲ್ಲ. ಇದು ನಟ ಪ್ರಕಾಶ್ ರಾಜ್ ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
Advertisement
ಕಲಬುರ್ಗಿ ಮತ್ತು ಗೌರಿ ಹತ್ಯೆ ಬಗ್ಗೆ ತನಿಖೆ ನಡೆದು ಹಂತಕರನ್ನು ಶೀಘ್ರವೇ ಬಂಧಿಸಬೇಕೆಂದು ಕೇಂದ್ರವೇ ಹೇಳಿದೆ. ಪ್ರಕಾಶ್ ರೈ ಅವರು ಕಾವೇರಿ ವಿವಾದ ಸಂದರ್ಭದಲ್ಲಿ ತಮ್ಮನ್ನು ಎಳೆಯಬೇಡಿ ಎಂದಿದ್ದರು. ರಾಜ್ಯದಲ್ಲಿ 12 ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ. ಇದರ ಬಗ್ಗೆ ಪ್ರಕಾಶ್ ರಾಜ್ ಯಾಕೆ ಇದುವರಗೆ ಹೇಳಿಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅವರು ಡಿವೈಎಫ್‍ಐ ಕಾರ್ಯಕ್ರಮದಲ್ಲಿ ವೇದಿಕೆಗೆ ತಕ್ಕಂತೆ ಮಾತಾಡಿದ್ದಾರೆ ಎಂದು ಕಿಡಿಕಾರಿದರು.
Advertisement
ಇದನ್ನೂ ಓದಿ: ಅವಾರ್ಡ್ ಗಳನ್ನ ವಾಪಸ್ ಕೊಡಲು ನಾನೇನು ಮೂರ್ಖನಾ?- ಪ್ರಕಾಶ್ ರಾಜ್
Advertisement
What's said…n what's not said. For all out there .. thank you pic.twitter.com/zIT7rnkFxb
— Prakash Raj (@prakashraaj) October 2, 2017
Advertisement