– ಬಿಜೆಪಿ ಮುಖಂಡನ ದೌರ್ಜನ್ಯಕ್ಕೆ ಕೊನೆ ಇಲ್ವಾ..?
ಬೆಂಗಳೂರು: ಶನಿವಾರ ಬೆಳಗಿನ ಜಾವ ಬಿಜೆಪಿ ಮುಖಂಡನೋರ್ವನ ಬೆಂಬಲಿಗರು ಎನ್ನಲಾದ 50 ರಿಂದ 60 ಜನರ ಗುಂಪು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ರಾಘವೇಂದ್ರ ನಗರದ ನಿಖಿಲ್ ರಾಜ್ ಎಂಬಬವರ ನಿವಾಸದಲ್ಲಿ ಈ ಘಟನೆ ನಡೆದಿದೆ.
ಶನಿವಾರ ಬೆಳಗಿನ ನಾಲ್ಕು ಗಂಟೆಗೆ ಮನೆಗೆ ನುಗ್ಗಿದ ಗೂಂಡಾ ಪಡೆ, ನಗ-ನಗದು-ಮನೆಯ ದಾಖಲೆ ಹಾಗೂ ಇನ್ನಿತರೆ ಬೆಲೆ ಬಾಳುವ ವಸ್ತುಗಳನ್ನ ದೋಚಿದೆ. ಬಿಜೆಪಿ ಮುಖಂಡ ಸುರೇಂದ್ರ ಗೌಡ ಜೊತೆ ಬಂದ ಗೂಂಡಾ ಟೀಂ ಕುತ್ತಿಗೆಗೆ ಮಚ್ಚಿಟ್ಟು ಬೆದರಿಸಿ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯನ್ನು ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೋಗಿದ್ದಾನೆ ಎಂದು ನಿಖಿಲ್ ರಾಜ್ ಆರೋಪಿಸುತ್ತಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಸುರೇಂದ್ರ ಗೌಡ ಮತ್ತು ನಿಖಿಲ್ ರಾಜ್ ಇಬ್ಬರು ಒಳ್ಳೆಯ ಗೆಳೆಯರಾಗಿದ್ದರು. ಸುರೇಂದ್ರ ಗೌಡ 13 ವರ್ಷಗಳ ಹಿಂದೆ ನಿಖಿಲ್ ರಾಜ್‍ನಿಂದ 25 ಲಕ್ಷ ರೂ. ಪಡೆದಿದ್ದನಂತೆ. ಅದಕ್ಕೆ ಬದಲಾಗಿ ಮನೆ ಬಿಟ್ಟುಕೊಟ್ಟಿದ್ದನಂತೆ. ಇತ್ತೀಚೆಗೆ ಏಕಾಏಕಿ ಮನೆ ಬಿಟ್ಟು ಕೊಡಿ ಎಂದು ಸುರೇಂದ್ರ ಗೌಡ ಕೇಳಿದ್ದ. ನಿಖಿಲ್ ದುಡ್ಡು ನೀಡಿದ್ರೆ ಮನೆ ಖಾಲಿ ಮಾಡುತ್ತೀವಿ ಎಂದು ಹೇಳಿದ್ದರಿಂದ ಕೋಪಗೊಂಡ ಸುರೇಂದ್ರ ಗೌಡ ತನ್ನ ಪಟಾಲಂ ಜೊತೆ ಬೆಳಗಿನ ಜಾವ ಮನೆಗೆ ಎಂಟ್ರಿ ಕೊಟ್ಟು ಪೀಠೋಪಕರಣ ಸೇರಿದಂತೆ ಎಲ್ಲವನ್ನು ಧ್ವಂಸ ಮಾಡಿದ್ದಾನೆ ಎಂದು ನಿಖಿಲ್ ಹೇಳುತ್ತಾರೆ.
Advertisement
Advertisement
ಬಿಜೆಪಿ ಮುಖಂಡ ಸುರೇಂದ್ರ ಗೌಡನ ದಬ್ಬಾಳಿಕೆ ದೌರ್ಜನ್ಯದಿಂದ ಕಂಗಾಲದ ನಿಖಿಲ್ ರಾಜ್ ಕುಟುಂಬ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ಕೊಡಲು ಹೋದ್ರೆ ತೆಗೆದುಕೊಳ್ತಿಲ್ಲವಂತೆ. ನನಗೆ ಮೋದಿ ಗೊತ್ತು, ಯಡಿಯೂರಪ್ಪ ಗೊತ್ತೆ ಅಂತೆಲ್ಲಾ ಹೇಳಿ ದೂರು ತೆಗೆದುಕೊಳ್ಳದಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದಾನೆ ಎಂದು ನಿಖಿಲ್ ಸೋದರಿ ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv