– ಸಿದ್ದರಾಮಯ್ಯ ಅವ್ರು ಹೊಸ ಜಾತಿಗಳ ಸೃಷ್ಟಿಸಿ ಶಾಶ್ವತ ಅಪರಾಧಿ ಆಗೋದು ಬೇಡ ಎಂದ ಶಾಸಕ
ಬೆಂಗಳೂರು: ಕ್ರಿಸ್ಚಿಯನ್ ಜೊತೆ 42 ಹಿಂದೂ ಉಪಚಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಈ ಸರ್ಕಾರ ಸೃಷ್ಟಿ ಮಾಡಿದೆ ಎಂದು ಶಾಸಕ ಸುನಿಲ್ ಕುಮಾರ್ (Sunil Kumar) ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸುನಿಲ್ ಕುಮಾರ್ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ತರಾತುರಿಯಲ್ಲಿ ಜಾತಿ ಸಮೀಕ್ಷೆ ನಡೀತಿದೆ. ಹೊಸದಾಗಿ ಜಾತಿಗಳ ಪಟ್ಟಿ ಸೃಷ್ಟಿ ಮಾಡಿದ್ದಾರೆ. ಇವಕ್ಕೆ ಸರ್ಕಾರದ ಯಾವುದೇ ದಾಖಲೆಗಳಿಲ್ಲ. ಕ್ರಿಶ್ಚಿಯನ್ ಜತೆ 47 ಹಿಂದೂ ಉಪಜಾತಿಗಳನ್ನು ಸೇರಿಸಿ ಹೊಸ ಜಾತಿಗಳ ಸೃಷ್ಟಿ ಮಾಡಿದ್ದಾರೆ. ಇದರ ಪರಿಣಾಮ ಮತಾಂತರಕ್ಕೆ ಸರ್ಕಾರ ಪರೋಕ್ಷ ಬೆಂಬಲ ಕೊಡ್ತಿದೆ. ಮುಂದೆ ಹಿಂದುಳಿದ ವರ್ಗಗಳ ಮೀಸಲಾತಿ ಕಸಿಯುವ ಹುನ್ನಾರ ನಡೀತಿದೆ. ಒಬಿಸಿ ಜಾತಿಗಳ ಮೀಸಲಾತಿ ಕ್ರಿಶ್ಚಿಯನ್ನರು ಕಸಿಯುವ ಹುನ್ನಾರ ಇದು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ
ಈ ಹಂತದಲ್ಲೇ ಇದನ್ನು ಚಿವುಟಿ ಹಾಕಬೇಕು. ಈ ನಿಟ್ಟಿನಲ್ಲಿ ಇವತ್ತು ದುಂಡುಮೇಜಿನ ಸಭೆ ನಡೆಸಿ ಮುಂದಿನ ಹಂತದ ಹೋರಾಟ, ಅಭಿಯಾನ ಬಗ್ಗೆ ಚರ್ಚೆ ಮಾಡ್ತೇವೆ. ಸರ್ಕಾರದ ಉದ್ದೇಶವೇ ಇಡೀ ಸಮಾಜ ಒಡೆಯುವುದು, ಮೀಸಲಾತಿ ಕಸಿಯುವುದು ಹಾಗೂ ಮತಾಂತರಕ್ಕೆ ಪ್ರಚೋದಿಸುವುದು ಆಗಿದೆ. ಸ್ವಾಮೀಜಿಗಳು ಇವತ್ತಿನ ಸಭೆಗೆ ಬರ್ತಾರೆ. ಸಿದ್ದರಾಮಯ್ಯನವ್ರು ಹೊಸ ಜಾತಿಗಳನ್ನು ಸೃಷ್ಟಿಸಿ ಶಾಶ್ವತ ಅಪರಾಧಿ ಆಗೋದು ಬೇಡ. ಇವತ್ತು ರಾಜ್ಯಪಾಲರಿಗೂ ಈ ಸಂಬAಧ ದೂರು ಕೊಡ್ತೇವೆ ಎಂದು ತಿಳಿಸಿದ್ದಾರೆ.
ಒಬಿಸಿ ವರ್ಗಗಳ ಮೀಸಲಾತಿ ಕಸಿಯುವ ಕೆಲಸಕ್ಕೆ ಮುಸುಕು ಹಾಕಿಕೊಂಡು ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ. ನಮ್ಮ ದೂರು, ಆಕ್ಷೇಪಣೆಗಳಿಗೆ ಹಿಂದುಳಿದ ವರ್ಗಗಳ ಆಯೋಗ ಕಿವಿಗೆ ಹಾಕಿಕೊಂಡಿಲ್ಲ. ಸರ್ಕಾರ ಅರಾಜಕತೆ ಸೃಷ್ಟಿಸಲು ಹೊರಟಿದೆ, ಇದಕ್ಕೆ ನಾವು ಬಿಡಲ್ಲ. ಇವತ್ತಿನ ಸಭೆ ನೂರಕ್ಕೂ ಹೆಚ್ಚು ಗಣ್ಯರು ಬರ್ತಾರೆ. ಮುಂದಿನ ಒಂದು ವಾರದಲ್ಲಿ ಹೋರಾಟ ಮಾಡ್ತೇವೆ. ರಾಜ್ಯಪಾಲರು ಮಧ್ಯಪ್ರವೇಶಕ್ಕೆ ಕೋರುತ್ತೇವೆ. ಈ ಹೊಸ ಜಾತಿಗಳ ಪಟ್ಟಿ ತೆಗೆಯುವಂತೆ ಸರ್ಕಾರಕ್ಕೆ ನಿರ್ದೇಶನ ಕೊಡಲು ರಾಜ್ಯಪಾಲರಿಗೂ ಭೇಟಿ ಮಾಡಿ ಮನವಿ ಮಾಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್
ಕುರುಬ ಸಮಯದಾಯ ಎಸ್‌ಟಿಗೆ ಸೇರಿಸಲು ಇಂದು ಸಭೆ ವಿಚಾರವಾಗಿ ಮಾತನಾಡಿ, ಯಾವುದೇ ಜಾತಿಗೆ ಇನ್ನೊಂದು ಜಾತಿ ಸೇರಿಸಬೇಕು ಅಂದ್ರೆ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ದೊಡ್ಡಮಟ್ಟದ ಚರ್ಚೆಗಳು ಆಗಬೇಕು. ಸಿದ್ದರಾಮಯ್ಯ ಕುರುಡು ಪ್ರೇಮ ತೋರಿಸಿ ಕುರುಬ ಸಮುದಾಯ ಎಸ್‌ಟಿಗೆ ಸೇರಿಸಲು ಹೊರಟಿದ್ದಾರೆ. ಆ ಮೂಲಕ ರಾಜ್ಯದ ಹಿತ ಮರೆತು ಸ್ವಹಿತ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.