ಬಜರಂಗದಳ ನಿಷೇಧ ಭರವಸೆ – ಪ್ರೊಫೈಲ್ ಫೋಟೋ ಬದಲಿಸಿದ BJP ನಾಯಕರು

Public TV
2 Min Read
Social Media

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಕಾಂಗ್ರೆಸ್‌ ಪಕ್ಷ ಮಂಗಳವಾರ ತನ್ನ ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದೆ.

ಎಸ್ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರ ವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಬಜರಂಗದಳವನ್ನು (Bajrang Dal) ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ (Congress) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

Congress Election Manifesto

ಕಾಂಗ್ರೆಸ್‌ ಬಜರಂಗದಳ ನಿಷೇಧ ಭರವಸೆಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ನಾನೊಬ್ಬ ಭಜರಂಗಿ ಅಂತಾ ಘೋಷಣೆ ಮಾಡ್ಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಭರವಸೆ ವಿರುದ್ಧ ಡಿಜಿಟಲ್ ಅಭಿಯಾನ ಕೈಗೊಂಡಿದ್ದು, ಬಜರಂಗದಳ ನಿಷೇಧ ಭರವಸೆಯನ್ನೇ ಚುನಾವಣಾ ಪ್ರಚಾರಕ್ಕೆ ಅಸ್ತ್ರ ಮಾಡಿಕೊಂಡಿದೆ ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

congress

ಕಡೇ 7 ದಿನದ ಆಟದಲ್ಲಿ ಜೈ ಭಜರಂಗಿ‌ ಕ್ಯಾಂಪೇನ್:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 7 ದಿನಗಳ ಬಾಕಿಯಿರುವ ಹೊತ್ತಿನಲ್ಲೇ ರಾಜ್ಯಾದ್ಯಂತ ʻಜೈ ಭಜರಂಗಿ‌ ಕ್ಯಾಂಪೇನ್ʼ ಶುರುವಾಗಿದೆ. ಬಜರಂಗದಳವನ್ನ ʻನಾನೊಬ್ಬ ಭಜರಂಗಿʼ ಎಂದು ತಿರುಗಿಸಿದೆ. ಇನ್ನೂ ಬಿಜೆಪಿ ಹೈಕಮಾಂಡ್‌ ಸಹ ಎಲ್ಲ ನಾಯಕರಿಗೂ ಖಡಕ್‌ ಸೂಚನೆ ಕೊಟ್ಟಿದ್ದು, ಕಾಂಗ್ರೆಸ್ ಟಾರ್ಗೆಟ್ ಮಾಡಿ‌ ಕಡೇ 7 ದಿನದ ಪ್ರಚಾರ ಮಾಡಲು ಸೂಚನೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

ಈ ಹಿಂದೆ ನಮಗೂ ಬಜರಂಗದಳಕ್ಕೂ ಸಂಬಂಧವೇ ಇಲ್ಲ ಎಂದು ಬಿಜೆಪಿಗರು ಹೇಳಿದ್ದರು. ಆದರೀಗ ಕಾಂಗ್ರೆಸ್ ಕೊಟ್ಟ ಬಜರಂಗದಳ ನಿಷೇಧ ಭರವಸೆಯ ಬ್ರಹ್ಮಾಸ್ತ್ರದಿಂದ ರಾಜಕೀಯ ತಿರುವು ಸಿಗುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.

Share This Article