ಜೈಪುರ: ಬಿಜೆಪಿ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ.
ಕಿರ್ಪಾಲ್ ಸಿಂಗ್ ಮೃತ ವ್ಯಕ್ತಿ. 2 ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸರ್ಕ್ಯೂಟ್ ಹೌಸ್‍ನಿಂದ ಮನೆಗೆ ಹೋಗುತ್ತಿದ್ದ ಕಿರ್ಪಾಲ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಭರತ್‍ಪುರದ ಬಿಜೆಪಿ ಸಂಸದ ರಂಜಿತಾ ಕೋಲಿ ಅವರ ಆಪ್ತ ಸಹಾಯಕ ಕಿರ್ಪಾಲ್ ಸಿಂಗ್ ಸಿಂಗ್ ಅವರ ದೇಹದ ಒಳಗೆ ದಾಳಿಯಲ್ಲಿ ಏಳು ಗುಂಡುಗಳು ಒಳಗೊಂಡಿದ್ದು. ಘಟನೆ ಸಂಬಂಧ ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರ್ಪಾಲ್ ಸಿಂಗ್ ಮೃತಪಟ್ಟಿದ್ದಾರೆ.
डीआरयूसीसी सदस्य एवं किसान मोर्चा के पूर्व प्रवक्ता भाई कृपाल सिंह जघीना जी के निधन के उपरांत आज के मेरे सभी कार्यक्रम रद्द किए जाते हैं।
— Ranjeeta Koli MP (@RanjeetaKoliMP) September 5, 2022
ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗಿತ್ತಿದೆ. ಆರೋಪಿಗಳಿಗೆ ಶೋಧ ನಡೆಯುತ್ತಿದ್ದು, ಈವರೆಗೂ ಯಾರನ್ನು ಬಂಧಿಸಿಲ್ಲ. ಜೊತೆಗೆ ಮರಣೋತ್ತರ ಪರಿಕ್ಷೆಯೂ ನಡೆಯುತ್ತಿದೆ ಎಂದು ಮಥುರಾ ಗೇಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಮನಾಥ್ ಸಿಂಗ್ ತಿಳಿಸಿದ್ದಾರೆ. ಗುಂಪು ವೈಷಮ್ಯದಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – 400ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಈ ಬಗ್ಗೆ ಸಂಸದ ರಂಜಿತಾ ಕೋಲಿ ಟ್ವೀಟ್ ಮಾಡಿ, ಡಿಆರ್‍ಯುಸಿಸಿ (ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ) ಸದಸ್ಯ ಮತ್ತು ಕಿಸಾನ್ ಮೋರ್ಚಾದ ಮಾಜಿ ವಕ್ತಾರ ಕೃಪಾಲ್ ಸಿಂಗ್ ಅವರ ನಿಧನದಿಂದಾಗಿ, ಇಂದಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರದಂತಹ ಘಟನೆ ನಡೆಯುತ್ತಲೇ ಇರುತ್ತೆ: ಜಾರ್ಖಂಡ್ ಸಿಎಂ ಹೇಳಿಕೆಗೆ ತೀವ್ರ ವಿರೋಧ