ಬೆಳಗಾವಿ: ಪಕ್ಷದ ಸಂಘಟನೆಗಾಗಿ ರಚಿಸಿದ್ದ ವಾಟ್ಸಪ್ ಗ್ರೂಪ್ನಲ್ಲಿ ಅಶ್ಲೀಲ ಫೋಟೋವೊಂದನ್ನು ಪೋಸ್ಟ್ ಮಾಡಿ, ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್ ಪೇಚೆಗೆ ಸಿಲುಕಿದ್ದಾರೆ.
ಸದ್ಯ ವಾಟ್ಸಪ್ ಗ್ರೂಪ್ನ ಸ್ಕ್ರಿನ್ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಬಿಜೆಪಿ ಕೆಎ ದಕ್ಷಿಣ ಮಂಡಲ’ ಹೆಸರಿನ ವಾಟ್ಸಪ್ ಗ್ರೂಪ್ನಲ್ಲಿ ಅವರು ಅಶ್ಲೀಲ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಶಶಿಕಾಂತ ಗೋವಾ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಮಧ್ಯ ರಾತ್ರಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿರುವ ಗ್ರೂಪ್ನಲ್ಲಿ ಅಶ್ಲೀಲ ಫೋಟೋ ಕಳಿಸಿದ್ದಾರೆ. ಇದನ್ನೂ ಓದಿ: ಮಗಳ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್
ಅಶ್ಲೀಲ ಫೋಟೋ ನೋಡಿದ ಮಹಿಳಾ ಕಾರ್ಯಕರ್ತೆಯರು ಗ್ರೂಪ್ನಿಂದ ಎಕ್ಸಿಟ್ ಆಗಿದ್ದಾರೆ. ಬಳಿಕ ಗ್ರೂಪ್ ಅಡ್ಮಿನ್ ಗ್ರೂಪ್ನಿಂದ ಎಲ್ಲರನ್ನೂ ರಿಮೂವ್ ಮಾಡಿ ಗ್ರೂಪ್ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್ಗೆ ರಾಹುಲ್ ಪತ್ರ