60 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ: ಆರ್‌. ಅಶೋಕ್‌ ಬಾಂಬ್‌

Public TV
1 Min Read
R Ashok bengaluru

– ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗಿದೆ ಎಂದ ವಿಪಕ್ಷ ನಾಯಕ

ಬೆಂಗಳೂರು: 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು (BPL Card) ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ವಿಪಕ್ಷ ನಾಯಕ ಅಶೋಕ್ (R Ashoka) ಹೊಸ ಬಾಂಬ್‌ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಗ್ಯಾರಂಟಿಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಇದೀಗ ಅಕ್ರಮ ಬಿಪಿಎಲ್ ಪಡಿತರದಾರರಿಗೆ ಚಾಟಿ ಬೀಸಲು ಮುಂದಾಗಿದೆ. ಇದನ್ನೇ ಈಗ ಬಿಜೆಪಿ ಅಸ್ತ್ರ ಮಾಡ್ಕೊಂಡಿದೆ. 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಾಂಬ್, ಆಟಂ ಬಾಂಬ್, ರಾಕೆಟ್ ಬಾಂಬ್ ಯಾರ‍್ಯಾರಿಟ್ಟಿದ್ದಾರೋ ಗೊತ್ತಿಲ್ಲ: ಆರ್.ಅಶೋಕ್

Siddaramaiah 2

ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಹಲವು ಕಠಿಣ ನಿಬಂಧನೆ ಹಾಕಲು ಮುಂದಾಗಿದೆ. ಗುಡಿಸಲಿನಲ್ಲಿದ್ದವರಿಗೆ ಮಾತ್ರ ಗ್ಯಾರಂಟಿಗಳು ಸಿಗಬೇಕು ಅಂತ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡ್ತಿದ್ದಾರೆ ಅಂತ ದೂರಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಸೂದೆ: ಬಿಬಿಎಂಪಿ ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ, ಇದು ಕನ್ನಡಿಗರಿಗಾಗಿಯೇ ಇರಬೇಕು: ಆರ್‌.ಅಶೋಕ್

Karnataka Budget 2023 4 pre poll congress guarantee schemes to cost 57910 crore CM Siddaramaiah

ಸಿದ್ದರಾಮಯ್ಯ ಸರ್ಕಾರ (Siddaramaiah’s Government) ಪಾಪರ್ ಆಗಿದೆ. ತೆರಿಗೆ ಹೆಚ್ಚಿಸಿದ್ರೂ ಸಂಬಳ ಕೊಡೋಕೆ ಆಗ್ತಿಲ್ಲ. ನಮ್ಮ ರಾಜ್ಯವೂ ಹಿಮಾಚಲದ ಸ್ಥಿತಿ ತಲುಪಿದೆ ಎಂದು ಲೇವಡಿ ಮಾಡಿದ್ರು. ಅಂದ ಹಾಗೇ, ಗೃಹಲಕ್ಷ್ಮಿ ಹಣ ಕಳೆದ ಎರಡ್ಮೂರು ತಿಂಗಳಿಂದ ರಿಲೀಸ್ ಆಗಿಲ್ಲ. ಶೀಘ್ರವೇ ಬಿಡುಗಡೆ ಮಾಡಲಾಗುತ್ತೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿ ಒಂದು ವಾರ ಕಳೆದಿದೆ. ಆದ್ರೂ, ಯಾರ ಖಾತೆಗೂ ಗೃಹಲಕ್ಷ್ಮಿ ಹಣ ಬಿದ್ದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್‌ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ

Share This Article