ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನೋಡುವಾಗ ಈ ಸಮ್ಮಿಶ್ರ ಸರ್ಕಾರದ ಕೌಂಟ್‍ಡೌನ್ ಶುರುವಾಗಿದೆ ಎಂದು ಬಿಜೆಪಿ ಮುಖಂಡ ಆರ್. ಆಶೋಕ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಂದಿದ್ದ ಹೊಸ ಸರ್ಕಾರಕ್ಕೆ ಬೆಂಬಲ ಸಿಗುತ್ತದೆ. ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಇಡೀ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಅಂತ ಹೇಳಿದ್ದರು. ಆದರೆ ಈ ಸ್ಥಳೀಯ ಸಂಸ್ಥೆಗಳ ಚುನವಾಣೆಯಲ್ಲಿ ಜೆಡಿಎಸ್ ಒಂದು ರೀತಿ ಹೀನಾಯ ಸ್ಥಿತಿಗೆ ಹೋಗಿರುವುದು ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದರು.
Advertisement
ಕಾಂಗ್ರೆಸ್ ಕೂಡ ಕಳೆದ ಬಾರಿ ಗೆದ್ದಿದ್ದ ಸ್ಥಾನಕ್ಕಿಂತ ಕಡಿಮೆ ಸ್ಥಾನವನ್ನು ಗಳಿಸಿದ್ದು, ಸ್ಥಾನಗಳನ್ನು ಕಳೆದುಕೊಂಡಿರುವುದು ಕಾಣುತ್ತದೆ. ಕೆಲವು ಮಹಾನಗರ ಪಾಲಿಕೆ, ಪುರಸಭೆ ಮತ್ತು ನಗರಸಭೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿದೆ. ಕಳೆದ ಬಾರಿಗಿಂತ ಡಬಲ್ ಸೀಟುಗಳು ಬಿಜೆಪಿ ಕಡೆ ವಾಲಿದೆ. ಆದ್ದರಿಂದ ನನಗೆ ಎಲ್ಲೋ ಒಂದು ಕಡೆ ಈ ಸರ್ಕಾರದ ಕೌಂಟ್‍ಡೌನ್ ಶುರುವಾಗಿದೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಈ ಫಲಿತಾಂಶಕ್ಕೆ ಜೆಡಿಎಸ್ ನ ಪ್ರಾಬಲ್ಯ ಮತ್ತು ಕಾಂಗ್ರೆಸ್ಸಿನ ಜಗಳ ಇರಬಹುದು. ಇವರ ಮಧ್ಯೆ ಇಂದು ರಾಜ್ಯದ ಜನರು, ಸಾಮಾನ್ಯವಾಗಿ ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತದೋ ಆ ಸರ್ಕಾರಕ್ಕೆ ಸಾರ್ವಜನಿಕರು ಬೆಂಬಲ ಕೊಡುತ್ತಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಜನರು ಬೆಂಬಲ ಕೊಡುವುದು ಸರ್ವೇ ಸಾಮಾನ್ಯ. ಆದರೆ ಎಲ್ಲೂ ಕೂಡ ಈ ಸರ್ಕಾರಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ ಎಂದ್ರು.
Advertisement
ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಸ್ಪಷ್ಟ ಬಹುಮತ ಲಭಿಸಿಲ್ಲ. ಜೆಡಿಎಸ್ ನ ಭದ್ರಕೋಟೆಯಾದ ಹಾಸನದಲ್ಲೂ ಸ್ಪಷ್ಟ ಬಹುಮತ ಸಿಗಲಿಲ್ಲ. ಶಿವಮೊಗ್ಗದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇದೆಲ್ಲವನ್ನು ನೋಡಿದರೆ ಈ ಸರ್ಕಾರಕ್ಕೆ ಜನ ಬೆಂಬಲ ಇಲ್ಲ ಎಂದು ಅನಿಸುತ್ತದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv