ಬೆಂಗಳೂರು: ಚುನಾವಣಾ ಅಖಾಡದಲ್ಲಿ ತರಾಟೆ ಒಂದ್ಕಡೆಯಾದ್ರೆ ನಾಯಕರ ಮಾತಿನ ಭರಾಟೆ ಕೂಡ ಜೋರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜು ಪರ ಭರ್ಜರಿ ರೋಡ್ ಶೋ ನಡೆಸಿದ, ಮಾಜಿ ಉಪ ಮುಖ್ಯಮಂತ್ರಿ ಆರ್.ಆಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಡಳಿತ ಮಾಡೋದನ್ನ ಸಿದ್ದರಾಮಯ್ಯ ನೋಡಿ ಪ್ರಧಾನಿ ಮೋದಿ ಕಲಿಬೇಕು ಅಂತಾರೆ.. ಆದ್ರೆ ಅವರು ಎಲ್ಲೋದ್ರು ನಿದ್ರೆ ಮಾಡ್ತಾರೆ. ಇದನ್ನ ಮೋದಿ ಕಲೀಬೇಕಾ..?. ಸಿದ್ದರಾಮಯ್ಯ ನಿದ್ದೆ ಮಾಡದ ಡಯಾಸ್ ನೀವು ನೋಡಿದ್ದೀರಾ?. ನಾನು ಯಾವುದೇ ಒಂದು ವೇದಿಕೆಯಲ್ಲಿ ನಿದ್ದೆ ಮಾಡಿಲ್ಲ ಅಂತ ಸಿದ್ದರಾಮಯ್ಯ ಪ್ರೂವ್ ಮಾಡಲಿ ನೋಡೋಣ ಅಂತ ಸಿಎಂಗೆ ಬಹಿರಂಗ ಸವಾಲು ಹಾಕಿದ್ರು.
Advertisement
Advertisement
ರಾಹು ಅಂದ್ರೆ ರಾಹುಲ್ ಗಾಂಧಿ, ಕೇತು ಅಂದ್ರೆ ಸಿದ್ದರಾಮಯ್ಯ.. ಇವರಿಬ್ಬರೂ ಕರ್ನಾಟಕಕ್ಕೆ ಮಾರಕ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. 22 ರಾಜ್ಯಗಳಲ್ಲಿನ ಜನರು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದಿದ್ದಾರೆ ಮುಂದಿನ ಸರದಿ ಕರ್ನಾಟಕದ್ದು ಎಂದರು.
Advertisement
ಜೀವನಪೂರ್ತಿ ನಮಗೆ ಹಾಲುಣಿಸುವ ಗೋಮಾತೆಯನ್ನು ತಿನ್ನೋಕೆ ಸಿದ್ದರಾಮಯ್ಯ ಮುಂದಾಗಿದ್ದರು. ಎತ್ತಿನಹೊಳೆ ಯೋಜನೆ ಬರಲಿಲ್ಲ ಅಂದ್ರೆ ಕಾಂಗ್ರೆಸ್ಸಿಗರು ಚುನಾವಣೆಗೆ ನಿಲ್ಲೋದಿಲ್ಲ ಅಂದ್ರು. ಆದ್ರೆ ಎತ್ತಿನಹೊಳೆ ಯೋಜನೆ ಇನ್ನೂ ಕಾರ್ಯಾರಂಭವೇ ಆಗಿಲ್ಲ. ಸಂಸದ ವೀರಪ್ಪ ಮೋಯ್ಲಿ ಪೈಪ್ ಲೈನ್‍ಗೆ ಮೂರುಸಾವಿರ ಕೋಟಿ ಗುಳುಂ ಮಾಡಿದ್ದಾರೆ ಅಂತ ಆರೋಪಿಸಿದ್ರು.
Advertisement
ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಂಚುತ್ತಿರುವುದು ಎತ್ತಿನಹೊಳೆ ಯೋಜನೆಯಿಂದ ಬಂದ ಹಣ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ ಸಿದ್ದರಾಮಯ್ಯನವರ ಸರ್ಕಾರ 4,4000 ರೂ ಸಾಲದ ಹೊರೆ ಹೊರಿಸಿದ್ದಾರೆ ಅಂತ ಕಿಡಿಕಾರಿದ್ರು.
ಇತ್ತ ವಿಜಯಪುರ ಸಮಾವೇಶದಲ್ಲಿ ಮಾತನಾಡಿದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಪ್ರಧಾನಿ ಮೋದಿ ದೇಶದ ಚೌಕಿದಾರ್ ಅಲ್ಲಾ ಚೋರ್.. ಅವರಿಗೆ ಕರ್ನಾಟಕ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ, ಬಿಜೆಪಿಗೆ ಯಾರು ಮತ ಹಾಕಬೇಡಿ ಎಂದು ಕರೆ ನೀಡಿದ್ರು.