ಗದಗ: ಒಂದು ಕಡೆ ಬಿಜೆಪಿಯ ರೆಬೆಲ್ ನಾಯಕರು ದೆಹಲಿಗೆ ಹೋದರೆ ಇನ್ನೊಂದು ಕಡೆ ಆಪ್ತರ ಮೂಲಕ ಇನ್ನುಳಿದವರ ಮನವೊಲಿಸುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಗದಗನಲ್ಲಿ ಬಿ.ಶ್ರೀರಾಮುಲು (B Sriramulu) ಹಾಗೂ ಪಿ.ರಾಜೀವ್ ಗುಪ್ತ ಮೀಟಿಂಗ್ ಮಾಡಿದ್ದಾರೆ.
ನಗರದ ಹೊಸ ಬಸ್ ನಿಲ್ದಾಣ ಬಳಿ ಇರುವ ಶ್ರೀರಾಮುಲು ಮನೆಗೆ ಪಿ.ರಾಜೀವ್ (P. Rajiv) ಬಂದಿದ್ದು, ಉಭಯ ನಾಯಕರ ಗುಪ್ತ ಮೀಟಿಂಗ್ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಪಿ.ರಾಜೀವ್ ಮಾಜಿ ಶಾಸಕ ಹಾಗೂ ಬಿಜೆಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಷ್ಟೇ ಅಲ್ಲದೇ ಪಿ.ರಾಜೀವ್ ವಿಜಯೇಂದ್ರ (BY Vijayendra) ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಶ್ರೀರಾಮುಲು ಅವರು ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದು, ಅವರನ್ನು ಸಮಾಧಾನ ಪಡಿಸಲು ರಾಜೀವ್ ಬಂದಿದ್ರಾ ಎನ್ನುವ ಕುತೂಹಲ ಪ್ರಶ್ನೆ ಮೂಡುತ್ತಿದೆ. ಶ್ರೀರಾಮುಲು ಮನೆಗೆ ಬಂದು ಭೇಟಿಯಾಗಿ ನಂತರ ಇಬ್ಬರು ಒಟ್ಟಾಗಿ ಹೊರ ಬಂದ ವಿಡಿಯೋ ಪಬ್ಲಿಕ್ ಟಿವಿಗೆ ಮಾತ್ರ ಲಭ್ಯವಾಗಿದೆ.