ನವದೆಹಲಿ: ಮುಸ್ಲಿಂ ವ್ಯಕ್ತಿಯೊಂದಿಗೆ ಬಿಜೆಪಿ ನಾಯಕನ ಮಗಳ ಮದುವೆ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಎರಡೂ ಕುಟುಂಬಗಳು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ರದ್ದುಗೊಳಿಸಿಕೊಂಡಿವೆ.
ಬಿಜೆಪಿ ನಾಯಕ ಯಶ್ಪಾಲ್ ಬೇನಾಂ ಅವರು ಮುಸ್ಲಿಂ ವ್ಯಕ್ತಿಯೊಂದಿಗೆ ತಮ್ಮ ಮಗಳ ಮದುವೆಯನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, “ಅದು ಅವರ ವೈಯಕ್ತಿಕ ವಿಚಾರ. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ. ಪರಸ್ಪರ ಒಪ್ಪಿಗೆಯಿಂದಲೇ ಮದುವೆ ನಿಶ್ಚಯಿಸಲಾಗಿತ್ತು. ಅದರಲ್ಲಿ ತಪ್ಪೇನಿತ್ತು” ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 2 ಸಾವಿರ ರೂ. ನೋಟು ಮೋದಿಗೆ ಇಷ್ಟವಿರಲಿಲ್ಲ – ಸಭೆಯ ಮಾಹಿತಿ ರಿವೀಲ್ ಮಾಡಿದ ನೃಪೇಂದ್ರ ಮಿಶ್ರಾ
Advertisement
Advertisement
ಮದುವೆಯ ಆಮಂತ್ರಣ ಪತ್ರಿಕೆಯ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾದ ನಂತರ ಬಿಜೆಪಿ ನಾಯಕ ಬೇನಾಮ್ ಅವರು ಶನಿವಾರ ಉತ್ತರಾಖಂಡದ ಪೌರಿ ಗಡ್ವಾಲ್ನಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗೆ ತಮ್ಮ ಮಗಳ ಮದುವೆಯನ್ನು ವರನ ಕುಟುಂಬದೊಂದಿಗೆ “ಪರಸ್ಪರ ಒಪ್ಪಿಗೆ” ಯೊಂದಿಗೆ ರದ್ದುಗೊಳಿಸಿದ್ದಾರೆ.
Advertisement
ಬಿಜೆಪಿ ಮುಖಂಡರ ಮಗಳ ಮದುವೆ ಮೇ 28ರಂದು ನಡೆಯಬೇಕಿತ್ತು. ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ನಾಯಕ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಸರ್ಕಾರಿ ಕಟ್ಟಡದಲ್ಲಿ 2.1 ಕೋಟಿ ರೂ. ಹಣ, 1 ಕೆಜಿ ಚಿನ್ನ ಪತ್ತೆ
Advertisement
ಸಾರ್ವಜನಿಕ ಪ್ರತಿನಿಧಿಯಾಗಿರುವ ನನಗೆ ನನ್ನ ಮಗಳ ಮದುವೆ ಪೊಲೀಸ್ ಮತ್ತು ಆಡಳಿತದ ರಕ್ಷಣೆಯಲ್ಲಿ ನಡೆಯುವುದು ಇಷ್ಟವಿರಲಿಲ್ಲ. ನಾನು ಸಾರ್ವಜನಿಕ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದ್ದಾರೆ.
ನನ್ನ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗಲು ಇಷ್ಟ ಪಟ್ಟಿದ್ದಳು. ಮಕ್ಕಳ ಸಂತೋಷ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎರಡೂ ಕುಟುಂಬಗಳು ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದೆವು. ಅದಕ್ಕಾಗಿ ಕಾರ್ಡ್ಗಳನ್ನು ಸಹ ಮುದ್ರಿಸಿ ಹಂಚಿಕೊಳ್ಳಲಾಗಿತ್ತು. ಆದರೆ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮದುವೆಗೆ ಹಲವು ರೀತಿಯ ಆಕ್ಷೇಪಗಳು ಬಂದಿವೆ. ಅದಕ್ಕಾಗಿ ಎರಡೂ ಕುಟುಂಬಗಳು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ರದ್ದುಗೊಳಿಸಿದ್ದೇವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: MIG-21 ಫೈಟರ್ ಜೆಟ್ ಹಾರಾಟ ಬಂದ್ – IAF ಮಹತ್ವದ ನಿರ್ಧಾರ