ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಿದಕ್ಕೆ ಬಿಜೆಪಿ ಮುಖಂಡ ಹಾಗು ಮಾಲೀಕಯ್ಯ ಗುತ್ತೇದಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ಸಿಎಂ ಬಿ.ಎಸ್.ಯಡಿಯೂರಪ್ಪ ಗೇ ಮಾಲೀಕಯ್ಯ ಕರೆ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲು ಆಗ್ರಹಿಸಿದ್ದರು, ಮಾಲೀಕಯ್ಯ ಗುತ್ತೇದಾರ ಅವರ ಮಾತಿಗೆ ಬೆಲೆಕೊಟ್ಟ ಸಿಎಂ ಯಡಿಯೂರಪ್ಪ ಕೂಡಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಆದೇಶ ಹೊರಡಿಸಿದ ಒಂದು ಗಂಟೆಯಲ್ಲಿಯೇ ಆದೇಶ ರದ್ದು ಮಾಡಿ ಕಲಬುರಗಿ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನು ಮುಂದುವರಿಸಿದ್ದಾರೆ.
ಡಿಸಿ ಅವರ ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ, ಈಗಾಗಲೇ ಜಿಲ್ಲಾಧಿಕಾರಿ ಬಿ.ಶರತ್ ಕೋವಿಡ್ ತಡೆಹಿಡಿಯಲು ಕಠಿಣ ಪರಿಶ್ರಮದಿಂದ ಲಾಕ್‍ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಜರುಗಿಸಿದ ಪರಿಣಾಮವೇ ಸೋಂಕು ತಡೆಹಿಡಿಯಲು ಯಶಸ್ವಿಯಾಗಿದೆ. ಆದ್ರೆ ಇತ್ತೀಚೆಗೆ ಬಂದ ತಬ್ಲಿಘಿಗಳಿಂದ ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಸಹ ಬಿ.ಶರತ್ ಅಧಿಕಾರಿಗಳ ತಂಡ ಕಟ್ಟಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಸೇರಿದಂತೆ ಇಡೀ ಜಿಲ್ಲೆಯ ಇಂಚಿಂಚು ಮಾಹಿತಿ ಸಹ ಶರತ್ ಅವರು ಕಲೆ ಹಾಕಿ ಕೆಲಸ ಮಾಡುವಾಗ ಕೆಲ ಪಟ್ಟಭದ್ದ ಹಿತಾಸಕ್ತಿಗಳ ಮಾತಿಗೆ ಬೆಲೆ ಕೊಡಬಾರದು ಅಂತಾ ಸಿಎಂ ಯಡಿಯೂರಪ್ಪ ಗೇ ಮಾಲೀಕಯ್ಯ ಗುತ್ತೇದಾರ ಕಿವಿ ಮಾತು ಹೇಳಿದ್ದಾರೆ.
ಇನ್ನು ಮಾಲೀಕಯ್ಯ ಅವರ ಮಾತಿಗೆ ಬೆಲೆಕೊಟ್ಟ ಸಿಎಂ ಯಡಿಯೂರಪ್ಪ ಅವರೇ ಕೂಡಲೇ ಖುದ್ದು ಡಿಸಿ ಶರತ್ ಗೆ ಕರೆ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲಾಗುವದು. ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮುಂದುವರೆಸಿ ಅಂತಾ ಬಿ.ಎಸ್.ವೈ ಸಹ ಅಭಯ ನೀಡಿದ್ದಾರೆ.