– ಅಮಿತ್ ಶಾ ಪರಿಚಯವೆಂದು ಹೇಳಿ ದೋಖಾ
ಕೊಪ್ಪಳ: ಉದ್ಯಮಿ ಗೋವಿಂದ ಪೂಜಾರಿ ಮಾದರಿಯಲ್ಲೇ ಕೊಪ್ಪಳ (Koppala) ಜಿಲ್ಲೆಯಲ್ಲೂ ಒಬ್ಬ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿ ಲಕ್ಷಾಂತರ ರೂ. ಟೋಪಿ ಹಾಕಿಸಿಕೊಂಡಿದ್ದಾರೆ.
Advertisement
ಕೊಪ್ಪಳದ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಹಣ ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ. ಹಿಂದೂ ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಂಚನೆ (Fraud) ಪ್ರಕರಣ ಸದ್ದು ಮಾಡಿದ ಹಿನ್ನೆಲೆ ಗಾಯತ್ರಿ ಪ್ರಕರಣ ಮುನ್ನೆಲೆಗೆ ಬಂದಿದೆ. ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಗಿಲ್ಲೇಸುಗೂರ ಲಕ್ಷಾಂತರ ರೂ. ಹಣ ಕೊಟ್ಟು ವಂಚನೆ ಒಳಗಾಗಿದ್ದಾರೆ.
Advertisement
Advertisement
ದೆಹಲಿ ಮೂಲದ ವಿಶಾಲ್ ನಾಗ್ ಹಾಗೂ ಬೆಂಗಳೂರಿನ ಜೀತು ಮತ್ತು ಗೌರವ್ ಎಂಬುವವರು ಬರೋಬ್ಬರಿ 21 ಲಕ್ಷ ರೂ. ಮುಂಗಡ ಹಣ ಪಡೆದು, ವಂಚನೆ ಮಾಡಿದ್ದಾರೆ. ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ವಂಚನೆ ನಡೆದಿದ್ದು, ಈ ಬಗ್ಗೆ ತಿಮ್ಮಾರೆಡ್ಡಿ ಗಿಲ್ಲೇಸುಗೂರ ಕಳೆದ 2 ತಿಂಗಳ ಹಿಂದೆಯೇ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Advertisement
ಆರೋಪಿಗಳು ತಾವು ಅಮಿತ್ ಶಾಗೆ ಆತ್ಮೀಯರಾಗಿದ್ದು, ಅವರ ಟೀಂನಲ್ಲೇ ಕೆಲಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದರು. ಜೊತೆಗೆ ರಾಜ್ಯದಲ್ಲಿ ಸಮೀಕ್ಷೆ ಮಾಡಿದ್ದು, ಕನಕಗಿರಿ ವಿಧಾನಸಭೆ ಕ್ಷೇತ್ರಕ್ಕೆ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ. ಜೊತೆಗೆ ಟಿಕೆಟ್ ಕೊಡಿಸುತ್ತೇವೆ ಎಂದು ವಂಚಿಸಿದ್ದರು. ತಮ್ಮ ರೀತಿಯಲ್ಲೇ ಬಹಳ ಆಕಾಂಕ್ಷಿಗಳಿಗೆ ವಂಚನೆ ಆಗಿದೆ ಎಂದು ತಿಮ್ಮಾರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?
ವಿಶಾಲ್ ನಾಗ್ ಎಂಬಾತ ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥ ಎಂದು ಪರಿಚಯಿಸಿಕೊಂಡಿದ್ದ. ಇದನ್ನು ನಂಬಿದ್ದ ತಿಮ್ಮಾರೆಡ್ಡಿ ಅವರು ವಿಶಾಲ್ ಬ್ಯಾಂಕ್ ಖಾತೆಗೆ 2 ಲಕ್ಷ ಸೇರಿ ಒಟ್ಟು 21 ಲಕ್ಷ ರೂ. ನಗದು ನೀಡಿದ್ದಾರೆ. ಟಿಕೆಟ್ ಸಿಗದಿದ್ದರಿಂದ ಹಣ ವಾಪಸ್ ಕೇಳಿದ್ದು, ಹಣ ವಾಪಾಸ್ ನೀಡದ್ದರಿಂದ ಆಕಾಂಕ್ಷಿ ಪತಿ ತಿಮ್ಮಾರೆಡ್ಡಿ ದೂರು ನೀಡಿದ್ದಾರೆ. ಇದರಿಂದ ಬಿಜೆಪಿ ಟಿಕೆಟ್‌ಗಾಗಿ ನಡೆದ ಡೀಲ್ ಪ್ರಕರಣ ಬಗೆದಷ್ಟೂ ಹೊರ ಬರಲಿವೆ. ಇದನ್ನೂ ಓದಿ: ಎಲ್ಲಾ ಪರೀಕ್ಷೆಗಳ ರಿಪೋರ್ಟ್ ನಾರ್ಮಲ್- ಚೈತ್ರಾ ಹೆಲ್ತ್ ಬುಲೆಟಿನ್ ರಿಪೋರ್ಟ್ ಇಲ್ಲಿದೆ
Web Stories