ಬಳ್ಳಾರಿ: ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರು ಹಂಪಿ ವಿರೂಪಾಕ್ಷೇಶ್ವರನಿಗೆ ಮೈಮರೆತು ಭಕ್ತಿಯಿಂದ ಹಾಡಿದ ಹಾಡಿನ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಎಲ್ಲರೂ ಕೆ.ಎಸ್.ಈಶ್ವರಪ್ಪನವರ ಉದ್ರೇಕಕರಾರಿ ಭಾಷಣಗಳನ್ನು ಕೇಳಿರುತ್ತಾರೆ. ಆದರೆ ಅದೇ ಈಶ್ವರಪ್ಪನವರು ಮೈಮರೆತು ಭಕ್ತಿಯಿಂದ ವಿರೂಪಾಕ್ಷನಿಗೆ ವಂದಿಸುತ್ತಾ ಹಾಡಿರುವ ಹಾಡು ಸಾಕಷ್ಟು ವೈರಲ್ ಆಗಿದೆ.
Advertisement
Advertisement
ಶನಿವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಿದ ಬಳಿಕ, ನದಿಯಲ್ಲಿ ಮುಳುಗಿ ಸ್ನಾನ ಮಾಡಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಭಾವಪರವಶರಾದ ಅವರು ಈಶ್ವರನನ್ನು ನೆನೆದು ಮೈಮರೆತು ಹಾಡಿದರು.
Advertisement
ದೇವಸ್ಥಾನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅರ್ಚಕರೆಲ್ಲರೂ ಇದ್ದರೂ, ಅದರ ಪರಿವೇ ಇಲ್ಲವೆಂಬಂತೆ ವಿರೂಪಾಕ್ಷನಲ್ಲಿ ಮೊರೆ ಇಟ್ಟು ಗಟ್ಟಿಯಾದ ಧ್ವನಿಯಲ್ಲಿ ಜಯ ಜಯ ಶಂಕರನೇ, ಜಯ ವಿಶ್ವೇಶ್ವರನೇ, ಈಶ ಗಿರೀಶ ಮಹೇಶ ಉಮೇಶ ಎಂದು ಹಲವು ನಿಮಿಷಗಳ ಕಾಲ ಭಕ್ತಿಗೀತೆಯನ್ನು ಹಾಡಿದ್ದು ಎಲ್ಲರ ಗಮನ ಸೆಳೆಯಿತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv