ಪಾಟ್ನಾ: ಶಿಕ್ಷಕರ ನೇಮಕಾತಿ ನಿಯಮಾವಳಿ ವಿರೋಧಿಸಿ ಪಾಟ್ನಾದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಲಾಠಿಚಾರ್ಜ್‌ಗೆ (Lathicharge) ಬಿಜೆಪಿ ನಾಯಕರೊಬ್ಬರು (BJP Leader) ಮೃತಪಟ್ಟಿದ್ದಾರೆ.
ಬಿಹಾರ ಸರ್ಕಾರದ (Bihar Government) ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ (Protest) ಆಯೋಜಿಸಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೋಗುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
Advertisement
#WATCH | Patna: Security personnel use water cannons and open lathi charge to disperse BJP workers protesting against Bihar govt on issue of the posting of teachers in the state pic.twitter.com/Vxp010wYDo
— ANI (@ANI) July 13, 2023
Advertisement
ಪೊಲೀಸರ ಲಾಠಿಯಿಂದ ಬಲವಾಗಿ ಏಟು ತಿಂದಿದ್ದ ಜೆಹಾನಾಬಾದ್ ಜಿಲ್ಲೆಯ ಅಧ್ಯಕ್ಷ ವಿಜಯ್ ಕುಮಾರ್ ಸಿಂಗ್ (Vijay Kumar Singh) ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹೋಗಿತ್ತು.
Advertisement
ಪ್ರತಿಭಟನೆಯನ್ನು ಚದುರಿಸಲು ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದರು. ಇದನ್ನೂ ಓದಿ: ಎಣ್ಣೆ ಏಟಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ್ರು!
Advertisement
#WATCH | Patna: Security personnel use several rounds of tear gas shells to disperse BJP workers protesting against Bihar govt pic.twitter.com/4zKcFh0TH7
— ANI (@ANI) July 13, 2023
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಪ್ರತಿಕ್ರಿಯಿಸಿ, ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ರಾಜ್ಯ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಮಹಾಘಟಬಂಧನ್ ಸರ್ಕಾರವು ಭ್ರಷ್ಟಾಚಾರದ ಕೋಟೆಯನ್ನು ರಕ್ಷಿಸುವ ಸಲುವಾಗಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಬಿಹಾರದ ಮುಖ್ಯಮಂತ್ರಿಗಳು ತಮ್ಮ ನೈತಿಕತೆಯನ್ನು ಮರೆತಿದ್ದಾರೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
Web Stories