Bengaluru City
ಅನಂತಕುಮಾರ್, ಬಿಎಸ್‍ವೈ, ನನ್ನನ್ನು ನೋಡಿ ಸೆಟ್ ದೋಸೆ ಅಂತಿದ್ರು: ಈಶ್ವರಪ್ಪ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮಾಜಿ ಶಾಸಕರು ಮತ್ತು ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಸಂತಾಪ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಡಿಸಿಎಂ. ಕೆ.ಎಸ್. ಈಶ್ವರಪ್ಪ ಅವರು, ನಾನು, ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ ಮೂವರು ವಿಧಾನಸಭೆಯಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಂಡು ಏನೇನು ಕೆಲಸ-ಕಾರ್ಯ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೆವು ಎಂದು ನೆನಪಿಸಿಕೊಂಡರು.
ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟನೆ ಬೆಳೆಯಬೇಕಾದರೆ ಅನಂತಕುಮಾರ್ ತುಂಬಾ ಶ್ರಮ ಪಟ್ಟಿದ್ದಾರೆ. ಅನಂತಕುಮಾರ್ ಜೊತೆ ಕಂಡಂತಹ ವಿಶೇಷ ಗುಣ ಎಂದರೆ ಅದು ಸ್ನೇಹವಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯರು ಅವರು, ಸ್ನೇಹಿತರಾದರೆ 10-20 ವರ್ಷದ ಬಳಿಕವೂ ಅವರಿಗೆ ಗೌರವ ಕೊಟ್ಟು ಹೆಸರು ಹಿಡಿದು ಕರೆಯುತ್ತಿದ್ದರು.
ವಿರೋಧ, ಆಡಳಿತ ಪಕ್ಷದಲ್ಲಿ ಇದ್ದೇವೆ ಅನ್ನೋದನ್ನ ಬಿಟ್ಟು ಅವರು ಕ್ಷೇತ್ರ ಮತ್ತು ದೇಶ ಅಭಿವೃದ್ಧಿ ಮಾಡಬೇಕು ಎಂದುಕೊಂಡಿದ್ದರು. ಅದರಂತೆಯೇ ಎಲ್ಲರ ಜೊತೆ ಸ್ನೇಹದಿಂದ ಇದ್ದು ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಸಮಾಜದ ಪ್ರಮುಖ ನಾಯಕರ ಬಗ್ಗೆ ನಮಗೆಲ್ಲ ವೈಯಕ್ತಿಕವಾಗಿ ಹೇಳುತ್ತಿದ್ದರು. ನಿಜಕ್ಕೂ ಅನಂತಕುಮಾರ್ ಅವರನ್ನು ಎಷ್ಟು ವರ್ಣನೆ ಮಾಡಿದರೂ ಸಾಲದು ಎಂದು ಹೇಳಿದರು.
ನಾನು, ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ ಮೂವರು ಒಟ್ಟಿಗೆ ಇದ್ದದ್ದನ್ನು ನೋಡಿ ಎಲ್ಲರೂ ಸೆಟ್ ದೋಸೆ ಎಂದು ಕರೆಯುತ್ತಿದ್ದರು. ಪ್ರೀತಿಯಿಂದ ಇದ್ದ ಅವರು ಸಾಮಾನ್ಯ ಜನರ ಮನಸ್ಸನ್ನು ಗೆಲ್ಲುತ್ತಿದ್ದರು. ಯಾವ ಖಾತೆಯನ್ನು ಕೊಟ್ಟರು ಅವರು ನಿಭಾಯಿಸುತ್ತಿದ್ದರು ಎಂದು ಅವರ ಬಗ್ಗೆ ಈಶ್ವರಪ್ಪ ಅವರು ಅವರ ಜೊತೆಗಿನ ಒಡನಾಡವನ್ನು ಹಂಚಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews
https://www.youtube.com/watch?v=uK_SiBW5Ly0
