Connect with us

ಕರ್ನಾಟಕದ ಜನತೆಯ ಮೇಲೆ ಸಾಲದ ಭಾರ ಹೊರಿಸಿದ ಬಜೆಟ್!

ಕರ್ನಾಟಕದ ಜನತೆಯ ಮೇಲೆ ಸಾಲದ ಭಾರ ಹೊರಿಸಿದ ಬಜೆಟ್!

ಬೆಂಗಳೂರು: ಇಂದಿನ ರಾಜ್ಯ ಬಜೆಟ್ ಬಗ್ಗೆ ರೈತ ಬಾಂಧವರು ಬಹಳಷ್ಟು ನಿರೀಕ್ಷೆ ಹೊಂದಿದ್ದರು. ಆದ್ರೆ ಬಜೆಟ್‍ನಲ್ಲಿ ಸಾಲ ಮನ್ನಾ ಮಾಡದೇ ಇರುವ ಕಾರಣ ಇಂದಿನ ಬಜೆಟ್ ಜನಸಾಮಾನ್ಯರಿಗೆ ನಿರಾಸೆ ಮೂಡಿಸಿದೆ ಅಂತಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ರಾಜ್ಯದ ಜನ ಇಂದಿನ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. ಆದ್ರೆ ಸಿಎಂ ಅವರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ನೊಂದು ಬೆಂದ ರೈತರಿಗೂ ಸಹ ಸಾಲ ಮನ್ನಾ ಮಾಡದೆ ನಿರಾಸೆ ಮೂಡಿಸಿದ್ದಾರೆ. ಒಟ್ಟಿನಲ್ಲಿ ಇವತ್ತಿನ ಬಜೆಟ್ ಕರ್ನಾಟಕದ ಜನತೆಯ ಮೇಲೆ ಸಾಲದ ಭಾರ ಹೊರಿಸಿದೆ ಅಂತಾ ಶೆಟ್ಟರ್ ವಿಷಾದ ವ್ಯಕ್ತಪಡಿಸಿದ್ರು.

ರಾಜ್ಯದ ರೈತರ ಸಾಲ ಮನ್ನಾ ಮಾಡಲು ಬಿಜೆಪಿ ಕಳೆದ ಮೂರು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಹೀಗಾಗಿ ಇನ್ನು ಮುಂದೆ ಸದನದ ಒಳಗೆ ಹಾಗೂ ಹೊರಗೆ ಈ ಬಗ್ಗೆ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದು ಹೇಳಿದರು.

Advertisement
Advertisement