ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ರಾಜ್ಯದ ಜನತೆಗೆ ಪದೇ ಪದೇ ಅಳುವ ಸಿಎಂ ಬೇಕಿಲ್ಲ ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಜೊತೆ ಅಧಿಕಾರ ಹಂಚಿಕೊಂಡ ನಾಯಕರು ಮಾತ್ರ ಮೈತ್ರಿಯೊಂದಿಗೆ ಖುಷಿಯಾಗಿದ್ದಾರೆ. ಉಳಿ ನಾಯಕರು, ಶಾಸಕರು ಮೈತ್ರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ನಾಡಿನ ಜನತೆಯೂ ಮೈತ್ರಿಯನ್ನು ಒಪ್ಪಿಕೊಂಡಿಲ್ಲ. ಸರ್ಕಾರ ರಚನೆಯಾದಗಿನಿಂದ ರಾಜ್ಯದಲ್ಲಿ ನಾಯಕರು ಪ್ರತಿದಿನ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿದಿನ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಏಳು ತಿಂಗಳು ಸರ್ಕಾರ ರಚಿಸಿ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಅಳುಬರುಕ ಸಿಎಂ ಎಷ್ಟು ದಿನ ಸಾಮ್ರಾಜ್ಯ ನಡೆಸಲು ಸಾಧ್ಯ. ನಾಡಿನ ಜನರ ಹಿತವನ್ನು ಕಾಯಬೇಕಿದ್ದ ರಾಜನೇ ಅಳಲು ಶುರು ಮಾಡಿಕೊಂಡ್ರೆ ಏನು ಮಾಡೋದಕ್ಕೆ ಅಗುತ್ತದೆ. ಸಿಎಂ ಅನ್ನುವ ಸ್ಥಾನ ಗುಲಾಬಿ ಹೂಗಳಿಂದ ಕೂಡಿದ ಹಾಸಿಗೆಯಲ್ಲ. ಅದೊಂದು ಮುಳ್ಳುಗಳಿಂದ ತಯಾರಾದ ಹಾಸಿಗೆ. ಹಾಗಾಗಿ ರಾಜನಾದಂತಹ ವ್ಯಕ್ತಿ ಪದೇ ಪದೇ ಕಣ್ಣೀರು ಹಾಕಬಾರದು. ನಮ್ಮ ಜೊತೆ ಸೇರಿ ಸಿಎಂ ಆದಾಗ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೂವಿನ ಹಾಸಿಗೆ ನೀಡಿತ್ತು. ಕೊನೆಗೇ ಅವರೇ ನಮ್ಮ ಮೇಲೆ ಮುಳ್ಳು ಹಾಕಿ ಕಾಂಗ್ರೆಸ್ ಜೊತೆ ಸೇರಿಕೊಂಡರು. ಕಾಂಗ್ರೆಸ್ ಕೇವಲ ಮುಳ್ಳಲ್ಲ, ಅದೊಂದು ವಿಷದ ಮುಳ್ಳು ಎಂದು ಆಕ್ರೋಶ ಹೊರಹಾಕಿದರು.
https://www.youtube.com/watch?v=OKtezRt3nd4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv