ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ಇಂದು ಕಣ್ಣೀರ ಹೊಳೆಗೆ ಸಾಕ್ಷಿಯಾಯ್ತು. ಚುನಾವಣೆ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಇಡೀ ಕುಟುಂಬವೇ ಕಣ್ಣೀರು ಹಾಕಿತ್ತು. ಈ ಕುರಿತು ಬಿಜೆಪಿ ಮುಖಂಡ ಗೋ ಮಧುಸೂದನ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ಮೇ 23ನೇ ತಾರೀಖಿನ ದೃಶ್ಯ ಈಗಲೇ ಯಾಕೆ ಕಾಣಿಸ್ತಿದೆ ಎಂದು ನನಗೆ ಅಚ್ಚರಿಯಾಯ್ತು. ಯಾಕಂದ್ರೆ ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತದೆ. ಅಂದು ಅವರು ಅಳಬೇಕಿತ್ತು. ಆದ್ರೆ ಈಗಲೇ ಇನ್ ಅಡ್ವಾನ್ಸ್ ಆಗಿ ಯಾಕೆ ಅಳ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ರು.
Advertisement
Advertisement
ಎಷ್ಟು ದಿನ ಇವರ ಅಳೋದನ್ನು ನೋಡಿ ನೋಡಿ ಜನ ಮರುಳಾಗುತ್ತಾರೆ? ಪ್ರತಿ ಚುನಾವಣೆಯಲ್ಲಿಯೂ ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಅಳೋದನ್ನು ಕಂಡಿದ್ದೇವೆ. ಹೀಗಾಗಿ ಜನ ಎಷ್ಟು ದಿನ ಎಂದು ಇವರುಗಳ ಅಳುವನ್ನು ನೋಡುತ್ತಾರೆ ಎಂದು ಪ್ರಶ್ನಿಸಿದ್ರು.
Advertisement
ಇವರನ್ನು ಯಾರೂ ಟೀಕೆ ಮಾಡಬಾರದು. ಒಬ್ಬ ಅಪ್ಪ ಮಗನಿಗೆ ಹಣ ಕೊಟ್ಟರೆ ಅದನ್ನು ತ್ಯಾಗ ಅಂತಾರಾ ಎಂದು ಪ್ರಶ್ನಿಸಿದ ಅವರು ದೇವೇಗೌಡರು ಮೊಮ್ಮಗನಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ತ್ಯಾಗವಲ್ಲ ಎಂದು ಹೇಳಿದ್ರು.
Advertisement
ದೇವೇಗೌಡರ ಕುಟುಂಬ ಕಣ್ಣೀರು ಹಾಕುವುದು ಪರಂಪರೆ. ಈ ರೀತಿ ಅತ್ಕೊಂಡು ಅತ್ಕೊಂಡೇ ದೇವೇ ಗೌಡರು ಗೆದ್ದುಕೊಂಡು ಬಂದಿದ್ದಾರೆ. ಅವರು ಕಣ್ಣೀರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇವರು ಅಳೋದನ್ನು ನೋಡಿ ಜನ ವೋಟು ಹಾಕ್ತಾರೋ ಅಲ್ಲಿಯವರೆಗೆ ಇವರು ಅಳುತ್ತಲೇ ಇರುತ್ತಾರೆ. ಯಾಕಂದ್ರೆ ನಾವು ಅತ್ತರೆ ಜನ ನಮಗೆ ವೋಟು ಹಾಕುತ್ತಾರೆ ಎಂದು ಇವರಿಗೆ ಗೊತ್ತು ಅಂದ್ರು.
ಇನ್ನೊಂದು ಅಚ್ಚರಿಯೆಂದರೆ ಸಾಮಾನ್ಯವಾಗಿ ದೇವೇಗೌಡರು ಚುನಾವಣೆಗೆ 3-4 ದಿನ ಇರುವಾಗ ಅಳುತ್ತಾರೆ. ಕುಮಾರಸ್ವಾಮಿಯವರು ಅಷ್ಟೇ ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಪ್ರಚಾರದ ಹಿಂದಿನ ದಿವಸ ಅತ್ತಿದ್ದರು. ಆದ್ರೆ ಈವಾಗ್ಯಾಕೇ ಪ್ರಾರಂಭದಲ್ಲೇ ಅಳುವುದಕ್ಕೆ ಶುರು ಮಾಡಿದ್ದಾರೆ ಅಲ್ವ ಎಂದು ಗಾಬರಿಯಾದೆ ಎಂದು ಹೇಳಿದ್ರು.
ಹಾಸನ ಜಿಲೆಲಯ ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದಂತೆಯೇ ದೇವೇಗೌಡ್ರು ಕಣ್ಣೀರು ಹಾಕಿದ್ದಾರೆ. ಅಪ್ಪನ ಕಣ್ಣೀರು ಹಾಕುತ್ತಿದ್ದಂತೆಯೇ ಸಭೆಯಲ್ಲಿ ಕುಳಿತಿದ್ದ ಸಚಿವ ರೇವಣ್ಣ ಕೂಡ ಬೇಸರಗೊಂಡಿದ್ದಾರೆ. ಇತ್ತ ತನ್ನ ಹೆಸರನ್ನು ತಾತ ಪ್ರಸ್ತಾಪ ಮಾಡುತ್ತಿದ್ದಂತೆಯೇ ವೇದಿಕೆಯಲ್ಲೇ ಪ್ರಜ್ವಲ್ ರೇವಣ್ಣ ಗಳಗಳನೇ ಅತ್ತಿದ್ದಾರೆ. ಈ ವೇಳೆ ತಾಯಿ ಭವಾನಿ ರೇವಣ್ಣ ಕೂಡ ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಪ್ರಚಾರದಲ್ಲಿ ಏಕಕಾಲಕ್ಕೆ ನಾಲ್ವರು ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv