ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇವಲ ಮಂಡ್ಯ, ಹಾಸನಕ್ಕೆ ಮಾತ್ರ ಬಜೆಟ್ ಮಂಡನೆ ಮಾಡಿದ್ದಾರಾ ಎಂದು ಪ್ರಶ್ನಿಸಿ ಬಿಜೆಪಿಯ ಮುಖಂಡ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿದ ಈಶ್ವರಪ್ಪ, ಇಡೀ ಕರ್ನಾಟಕಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ನಡೆಯುತ್ತಿದೆವೋ ಎಂಬ ಅನುಮಾನ ಬರುತ್ತಿದೆ. ಒಟ್ಟಾರೆ ಇಡೀ ರಾಜ್ಯದ ಎಲ್ಲಾ ವರ್ಗದ ಜನರಿಗೆ ದೋಖಾ ಮಾಡಿರುವಂತಹ ದೋಖಾ ಬಜೆಟ್ ಇದು ಎಂದು ತುಂಬಾ ನೊಂದು ಹೇಳುತ್ತಿದ್ದೇನೆ ಎಂದರು.
Advertisement
ನೇಕಾರರ ಬಗ್ಗೆನೂ ಇಲ್ಲ, ಹಿಂದುಳಿದವರಿಗೂ ವಿಶೇಷವಾಗಿ ಏನು ಇಲ್ಲ. ಈ ರೀತಿ ದಲಿತರ ಬಗ್ಗೆ ಅಲ್ಲೊಂದು ಇಲ್ಲೊಂದು ಹೇಳಿದ್ದಾರೆ. ಇಲ್ಲ ಅಂತ ನಾನು ಹೇಳಲ್ಲ. ಹಾಗಾಗಿ ಇವರು ತುಂಬಾ ಅನ್ಯಾಯವಾಗಿ ಇಡೀ ರಾಜ್ಯದ ಜನರಿಗೆ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಆಸೆ ತೀರಿಸಿಕೊಂಡಿದ್ದು ಬಿಟ್ಟರೆ ರಾಜ್ಯದ ಜನತೆಗೆ ಯಾವುದೇ ನಿರೀಕ್ಷೆಗೆ ತಕ್ಕಂತೆ ಇವರ ಬಜೆಟ್ ನಲ್ಲಿ ಇಲ್ಲ. ಇದು ರಾಜ್ಯದ ಜನತೆಗೆ ದೋಖಾ ಬಜೆಟ್ ಅಂತ ನಾನು ಒತ್ತಿ ಹೇಳುತ್ತೇನೆ ಎಂದು ಆಕ್ರೋಶದಿಂದ ಹೇಳಿದರು.
Advertisement
ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ ಅಂತ ಕುಮಾರಸ್ವಾಮಿ ಹೇಳಿದ್ದರು. ಆದರೆ ಮಾಡಿಲ್ಲ, ಆದ್ದರಿಂದ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೂತು ಚರ್ಚೆ ಮಾಡಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ಯೋಚನೆ ಮಾಡುತ್ತೇವೆ. ಖಂಡಿತ ರೈತರ ಪರ ಹೋರಾಟ ಮಾಡುತ್ತೇವೆ. ಸಾಲಮನ್ನಾ ಆಗೋವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಈಶ್ವರಪ್ಪ ಹೇಳಿದರು.