– ಬಾರ್ ಗೆ ನುಗ್ಗಿ ವೇಟರ್ ಗೆಳಿಗೆ ಥಳಿತ
ಹುಬ್ಬಳ್ಳಿ: ರಾಷ್ಟ್ರೀಯ ಪಕ್ಷದ ಮುಖಂಡನ ಸೋದರನೊಬ್ಬ ತನ್ನ ಸಹಚರರ ಜೊತೆ ಬಾರ್ ನಲ್ಲಿ ಗಲಾಟೆ ಮಾಡಿ, ಕಂಡ ಕಂಡವರಿಗೆ ಥಳಿಸಿ ಗೂಂಡಾಗಿರಿ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿಯ ಕೋರ್ಟ್ ವೃತ್ತದ ಬಳಿಯಿರುವ ಗ್ರೀನ್ ಗೇಟ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಗಂಗಾಧರ ನಗರದ ಯುವಕ ಬಾರ್ ಗೆ ಕುಡಿಯಲು ಬಂದಾಗ ಗಲಾಟೆ ಆರಂಭವಾಗಿದೆ. ಅಷ್ಟರಲ್ಲಿ ಮೂವರು ವೇಟರ್ ಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ರೆಸ್ಟೋರೆಂಟ್ ನಲ್ಲಿ ಗೊಂದಲ ಉಂಟಾಗಿದೆ.
Advertisement
Advertisement
ಈ ಗಲಾಟೆ ನೋಡಿ ಹಲವು ಗ್ರಾಹಕರು ಓಡಿ ಹೋಗಿದ್ದಾರೆ. ಸಮಯ ಮೀರಿದ ಮೇಲೆಯೂ ಬಾರ್ ನಲ್ಲಿ ಡ್ರಿಂಕ್ಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಇನ್ನು ಅಭಿಜಿತ್ ಎಂಬ ವೇಟರ್ ಗೆ ಕಿವಿಯಲ್ಲಿ ರಕ್ತ ಬರುವಂತೆ ರಾಡ್ ನಿಂದ ಯುವಕರು ಥಳಿಸಿದ್ದಾರೆ.
Advertisement
ಈ ಗಲಾಟೆ ಬಗ್ಗೆ ಉಪನಗರ ಠಾಣೆಯ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದಾರೆ. ಆದರೆ ಪೊಲೀಸರು ಬರುವ ಮುನ್ನವೇ ತನ್ನ ಸಹಚರ ಜೊತೆ ಬಿಜೆಪಿ ಮುಖಂಡನ ಸೋದರ ಪರಾರಿಯಾಗಿದ್ದಾನೆ.