ಬಿಎಸ್‍ವೈ ಸಫಾರಿಯ 2 ಜೇಬಿನ ರಹಸ್ಯ ಬಿಚ್ಚಿಟ್ಟ ಬಿ.ಎಲ್ ಸಂತೋಷ್

Advertisements

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಫೇವರೇಟ್ ಡ್ರೆಸ್ ಸಫಾರಿ. ಬಿಳಿ ಸಫಾರಿ ಅವರ ನೆಚ್ಚಿನ ಡ್ರೆಸ್. ಆ ಸಫಾರಿಯ ಕೆಳ ಭಾಗದಲ್ಲಿ ಎರಡು ಜೇಬುಗಳು ಮಾತ್ರ ವಿಶಿಷ್ಟವಾದವು. ಆ ಎರಡು ಜೇಬಿನ ರಹಸ್ಯವನ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಚ್ಚಿಟ್ಟಿದ್ದಾರೆ.

ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿ.ಎಲ್ ಸಂತೋಷ್ ಯಡಿಯೂರಪ್ಪ ಬಗ್ಗೆ ಮಾತನಾಡಿ ಹಲವು ವಿಷಯಗಳನ್ನ ಬಿಚ್ಚಿಟ್ಟರು. ಹೀಗೆ ಮಾತನಾಡುವಾಗ ಯಡಿಯೂರಪ್ಪ ಅವರ ಜೇಬು ಮತ್ತು ಚೀಟಿಯ ಬಗ್ಗೆ ಹೇಳಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ ಅವರ ಸಫಾರಿಯಲ್ಲಿ ಎರಡು ಜೇಬುಗಳು ಇರುತ್ತವೆ. ಆ ಜೇಬುಗಳಲ್ಲಿ ಯಾವಾಗಲೂ ಒಂದಷ್ಟು ಚೀಟಿಗಳು ಇರುತ್ತವೆ. ಆ ಎರಡು ಜೇಬುಗಳು ಅವರಿಗೆ ಗಣಿ ಇದ್ದಂತೆ. ಏನಾದ್ರೂ ಘೋಷಣೆ ಮಾಡ್ಬೇಕಾಗಲೀ, ಯಾರನ್ನಾದ್ರೂ ಬೈಯ್ಯಬೇಕಾಗಲೀ, ಆ ಚೀಟಿ ತೆಗೆದರೆ ಸಾಕಾಗುತ್ತೆ ಅಂತೇಳಿದ್ರು.

Advertisements

ಅಷ್ಟೇ ಅಲ್ಲ ಬಿಜೆಪಿ ಸಭೆಗಳಲ್ಲಿ ಯಡಿಯೂರಪ್ಪ ಚೀಟಿಗೆ ಕುತೂಹಲ ಇರುತ್ತಿದ್ದನ್ನು ಸಹ ಬಹಿರಂಗಪಡಿಸಿದ್ರು. ನಾವೆಲ್ಲ ಸಭೆಗಳಲ್ಲಿ ಕುಳಿತಿರುವಾಗ ಯಡಿಯೂರಪ್ಪ ಭಾಷಣ ಮಾಡಲು ಎದ್ದರೆ ಎಷ್ಟು ಚೀಟಿ ತೆಗೆಯುತ್ತಾರೆ ಅಂತ ಕುತೂಹಲದಿಂದ ನೋಡುತ್ತಿದ್ದೆವು. ಇಂದು ಕೂಡ ಅವರ ಜೇಬಲ್ಲಿ ಚೀಟಿಗಳಿವೆ. ಅದನ್ನ ತೆಗೆಯುತ್ತಾರೆ ನೋಡಿ ಬೇಕಾದ್ರೆ ಎಂದು ಬಿ.ಎಲ್.ಸಂತೋಷ್ ಹೇಳಿದ್ರು.

Advertisements
Advertisements
Exit mobile version