Connect with us

Bellary

ರೌಡಿಶೀಟರ್, ಬಿಜೆಪಿ ಮುಖಂಡ ಬಂಡಿ ರಮೇಶ ಕೊಲೆ ಪ್ರಕರಣ: ಮೂವರು ಮಹಿಳೆಯ ಬಂಧನ

Published

on

ಬಳ್ಳಾರಿ: ಜಿಲ್ಲೆಯ ರೌಡಿಶೀಟರ್, ಬಿಜೆಪಿ ಮುಖಂಡ ಬಂಡಿ ರಮೇಶನನ್ನು ಭೀಕರವಾಗಿ ಕೊಲೆ ಮಾಡಿದ ಮೂವರು ಮಹಿಳೆಯರನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಕೊಲೆ ಪ್ರಕರಣ ಪ್ರಮುಖ ಆರೋಪಿಯಾದ ಜಗ್ಗ ಅಲಿಯಾಸ ಜಗದೀಶನ ಸಂಬಂಧಿಕರಾದ ನೀಲಮ್ಮ, ಮಂಗಮ್ಮ, ಲಕ್ಷಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಡಿ ರಮೇಶನ ಕೊಲೆ ನಂತರ ಪರಾರಿಯಾಗಿದ್ದ ಮೂವರು ಮಹಿಳೆಯರನ್ನು ಇಂದು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತ ಮೂವರು ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಿಲಾಗಿದೆ. ಬಂಡಿ ರಮೇಶ ಕೊಲೆ ಪ್ರಕರಣದಲ್ಲಿ ಇನ್ನೂ 8 ಜನ ಪ್ರಮುಖ ಆರೋಪಿಗಳು ಸೇರಿದಂತೆ ಮತ್ತಿತರೂ ಪರಾರಿಯಾಗಿದ್ದಾರೆ.

ಏನಿದು ಪ್ರಕರಣ?: ಬಳ್ಳಾರಿಯ ರೌಡಿ ಶೀಟರ್ ಬಂಡಿ ರಮೇಶನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದ ಸಾಯಿ ಪವನ್ ದಾಬಾದಲ್ಲಿ ಗುರುವಾರ ಮಧ್ಯಾಹ್ನ ಮದ್ಯ ಸೇವನೆ ಮಾಡುತ್ತಿದ್ದ ಬಂಡಿ ರಮೇಶ ಹಾಗೂ ಆತನ ಸಹಚರರ ಮೇಲೆ ಖಾರದಪುಡಿ ಎರಚಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.

ಬಂಡಿ ರಮೇಶ ಈ ಹಿಂದೆ 2 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಲವಾರು ಅಪರಾಧ ಪ್ರಕರಣಗಳಲ್ಲೂ ಸಹ ಇತನ ಹೆಸರು ಕೇಳಿಬಂದಿತ್ತು. ಅಲ್ಲದೇ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರಮೇಶನ ಕಳೆದ ವರ್ಷ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬಳ್ಳಾರಿ ನಗರ ಎಸ್‍ಟಿ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದನು. ಆದ್ರೆ ಇತ್ತೀಚಿಗಿನ ಕೆಲ ಘಟನೆಗಳ ನಂತರ ರಮೇಶ ಬಜೆಪಿ ಪಕ್ಷದಿಂದ ದೂರ ಉಳಿದಿದ್ದನು. ರಮೇಶನ ಹತ್ಯೆಯ ವೇಳೆ ಕೆಲ ಮಹಿಳೆಯರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿತ್ತು. ಹೀಗಾಗಿ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಮುರಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

Click to comment

Leave a Reply

Your email address will not be published. Required fields are marked *