ಲಕ್ನೋ: ಪಕ್ಷದ ಪರವಾಗಿ ನಾಯಕರು ಭಿನ್ನ ಭಿನ್ನ ಪ್ರಚಾರ ನಡೆಸುವುದು ನೀವು ನೋಡಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರು ಪಕ್ಷದ ಪ್ರಚಾರ ಸಭೆಯಲ್ಲಿ ಮ್ಯಾಜಿಕ್ ಮಾಡಿ ಸುದ್ದಿಯಾಗಿದ್ದಾರೆ.
ರಾಂಪುರದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅಜಯ್ ದಿವಾಕರ್ ಅವರು ಬಿಎಸ್‍ಪಿ, ಎಸ್‍ಪಿ, ಕಾಂಗ್ರೆಸ್ ಧ್ವಜವನ್ನು ಬಿಜೆಪಿ ಧ್ವಜವನ್ನಾಗಿ ಪರಿವರ್ತಿಸಿ ಮ್ಯಾಜಿಕ್ ಮಾಡಿದ್ದಾರೆ.
Advertisement
#WATCH BJP leader Ajay Diwakar demonstrates trick to combine flags of three political parties into one BJP flag, during campaigning in Rampur for upcoming by-elections. (16.10) pic.twitter.com/xiZb09mX6W
— ANI UP/Uttarakhand (@ANINewsUP) October 17, 2019
Advertisement
ಆರಂಭದಲ್ಲಿ ವೇದಿಕೆಯ ಮೇಲೆ ಬಂದ ಅಜಯ್ ದಿವಾಕರ್ ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷ, ಬಿಜೆಪಿ ಧ್ವಜವನ್ನು ಎತ್ತಿ ತೋರಿಸುತ್ತಾರೆ. ನಂತರ ವೇದಿಕೆ ಮೇಲೆ ಕುಳಿತ ನಾಯಕರ ಬಳಿ ಈ ಧ್ವಜವನ್ನು ಪರಿಶೀಲಿಸುವಂತೆ ಹೇಳುತ್ತಾರೆ. ಆ ವ್ಯಕ್ತಿ ಕೈಯಲ್ಲಿರುವ ಧ್ವಜವನ್ನು ಪರಿಶೀಲಿಸುತ್ತಾರೆ.
Advertisement
ಇದಾದ ಬಳಿಕ ಅಜಯ್ ದಿವಾಕರ್ ಎಲ್ಲ ಧ್ವಜಗಳನ್ನು ಒಟ್ಟಿಗೆ ಸೇರಿಸಿ ಗಂಟು ಹಾಕುತ್ತಾರೆ. ಮೂರು ಗಂಟು ಹಾಕಿದ ನಂತರ ಬಿಜೆಪಿಯ ಧ್ವಜದಿಂದ ಎಲ್ಲವನ್ನು ಮುಚ್ಚುತ್ತಾರೆ. ನಂತರ ಕೈಯನ್ನು ಮೂರು ನಾಲ್ಕುಬಾರಿ ಮೇಲೆ ಮಾಡಿ ಬಿಡಿಸಿದಾಗ ಬಿಜೆಪಿಯ ಒಂದೇ ಧ್ವಜವನ್ನು ಪ್ರದರ್ಶಿಸುತ್ತಾರೆ. ಧ್ವಜದ ಹಿಂಭಾಗ ಮತ್ತು ಮುಂಭಾಗವನ್ನು ತೋರಿಸಿ ನೋಡಿ ನನ್ನ ಬಳಿ ಒಂದೇ ಧ್ವಜ ಇರುವುದು ಎಂದು ಎಂದು ಹೇಳುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.