ರಾಂಚಿ: ಕಾರ್ಯಕರ್ತರೊಬ್ಬರ ಬಿಜೆಪಿ ಸಂಸದರೊಬ್ಬರ ಪಾದ ಪೂಜೆ ಮಾಡಿ, ಕೊನೆಗೆ ಅದೇ ಗಲೀಜು ನೀರು ಕುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜಾರ್ಖಂಡ್ ರಾಜ್ಯದ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಪಾದಪೂಜೆ ಮಾಡಿಸಿಕೊಂಡ ಸಂಸದರು. ಸಾರ್ವಜನಿಕ ಸಮಾರಂಭದಲ್ಲಿ ಪಾದ ಪೂಜೆ ಮಾಡಿಸಿಕೊಂಡು ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
Advertisement
ಗುಡ್ಡಾ ಜಿಲ್ಲೆಯ ಕಲಾಲಿ ಗ್ರಾಮದ ಸೇತುವೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಸದ ನಿಶಿಕಾಂತ್ ದುಬೆ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವ, ಸಂಸದರು ಸೇತುವೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸೇತುವೆ ನಿರ್ಮಾಣದಿಂದ ನಮಗೆ ಅನುಕೂಲವಾಗಿದೆ. ಹಾಗಾಗಿ ನನಗೆ ಇಂದು ಸಂಸದರ ಪಾದಪೂಜೆ ಮಾಡಬೇಕು ಅಂತಾ ಅನಿಸುತ್ತಿದೆ ಅಂತಾ ಹೇಳಿದರು.
Advertisement
Advertisement
ತಮ್ಮ ಭಾಷಣ ಮುಗಿಸಿದ ಕಾರ್ಯಕರ್ತ ತಾವು ಹೇಳಿದಂತೆ ತುಂಬಿದ ಸಮಾರಂಭದಲ್ಲಿಯೇ ಸಂಸದ ಪಾದ ಪೂಜೆಗೆ ಮುಂದಾದರು. ಆದ್ರೆ ಸಂಸದರು ಮಾತ್ರ ಪಾದ ಪೂಜೆಗೆ ಯಾವುದೇ ವಿರೋಧ ವ್ಯಕ್ತಪಡಿಸದೇ ಖುಷಿಯಾಗಿ ಕಾಲುಗಳನ್ನು ತೊಳೆಸಿಕೊಂಡಿದ್ದಾರೆ. ಕಾರ್ಯಕರ್ತ ಇಷ್ಟಕ್ಕೆ ಸುಮ್ಮನಾಗದ ಪಾದಪೂಜೆ ಮಾಡಿದ ನೀರನ್ನು ಅಮೃತ ಅಂತಾ ಸೇವನೆ ಮಾಡಿದ್ದಾರೆ.
Advertisement
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಂಸದರ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಕರ್ತ ಪಾದಪೂಜೆಗೆ ಮುಂದಾದ್ರೆ ಸಚಿವರು ತಡೆಯುವ ಪ್ರಯತ್ನ ಮಾಡಬಹುದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
#WATCH BJP worker washes feet of BJP Godda MP Nishikant Dubey and drinks that water, at an event in Jharkhand's Godda (16.09.18) pic.twitter.com/J2YwazQDhg
— ANI (@ANI) September 17, 2018