ಬೆಂಗಳೂರು: ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವಷ್ಟು ಪ್ರೀತಿ ಸಿದ್ದರಾಮಯ್ಯ ಅವರಿಗಿದೆಯಾ ಎಂದು ಬಿಜೆಪಿ ಪ್ರಶ್ನಿಸಿದೆ.
ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೋಲಿಸರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಪೊಲೀಸರ ಈ ಕೃತ್ಯ ಅಮಾನವೀಯ, ನಾಚಿಕೆಗೇಡು. ಪೊಲೀಸರು ದಾಖಲಿಸಿದ ಪ್ರಕರಣ ತಕ್ಷಣ ವಾಪಸ್ ಪಡೆಯಬೇಕು. ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಟ ಶ್ರೀನಿವಾಸ ಪೂಜಾರಿ ಗಮನಕ್ಕೆ ಬರದೇ ಪೊಲೀಸರು ಪ್ರಕರಣ ದಾಖಲಿಸಿದ್ದಾರಾ? ಹಾಗೆ ನಡೆದಿದ್ದರೆ ಕೋಟ ಒಬ್ಬ ಅಸಮರ್ಥ ಸಚಿವ. ಹಿಂದೂಗಳೆಲ್ಲ ಒಂದು ಎನ್ನುವ ಬಿಜೆಪಿ, ನಿಮ್ಮೊಳಗೆ ಕೊರಗಗರು ಸೇರಿಲ್ಲವೇ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಸೇವಾ ಭಾರತಿ ಟ್ರಸ್ಟ್ನಿಂದ ಕಿಮ್ಸ್ಗೆ ಆಂಬುಲೆನ್ಸ್ ಹಸ್ತಾಂತರ
Advertisement
ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು
ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ
ಅತ್ಯಂತ ನಾಚಿಕೆಗೇಡಿನ ಸಂಗತಿ.
ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು @CMofKarnataka ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು.
2/6#ದಲಿತವಿರೋಧಿ_ಬಿಜೆಪಿ
— Siddaramaiah (@siddaramaiah) December 31, 2021
Advertisement
ಇದೀಗ ಸಿದ್ದರಾಮಯ್ಯ ಅವರ ಟ್ವೀಟ್‍ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವರು ಭಾರೀ ದಲಿತ ಪರವಾದ ಕಾಳಜಿ ತೋರ್ಪಡಿಸುತ್ತಿದ್ದಾರೆ. ದಲಿತ ರಾಜಕಾರಣಿಗಳನ್ನು ತುಳಿದು ಮೇಲೆ ಬಂದಿರುವ ಸಿದ್ದರಾಮಯ್ಯ, ಈ ಇತಿಹಾಸ ಹೊಂದಿರುವ ಸಿದ್ದರಾಮಯ್ಯಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯತ್ತಿದೆ. ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವಷ್ಟು ಪ್ರೀತಿ ಇದೆಯೇ ಸಿದ್ದರಾಮಯ್ಯ ಎಂದಿದ್ದಾರೆ.
Advertisement
ಸಿದ್ದರಾಮಯ್ಯ ಅವರ ಭಾರೀ ದಲಿತ ಪರವಾದ ಕಾಳಜಿ ತೋರ್ಪಡಿಸುತ್ತಿದ್ದಾರೆ.
ದಲಿತ ರಾಜಕಾರಣಿಗಳನ್ನು ತುಳಿದು ಮೇಲೆ ಬಂದಿರುವ ಇತಿಹಾಸವನ್ನು ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯತ್ತಿದೆ.
ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವಷ್ಟು ಪ್ರೀತಿ ಇದೆಯೇ ಸಿದ್ದರಾಮಯ್ಯ?#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) December 31, 2021
Advertisement
ಈ ಪ್ರಕರಣ ನಡೆದಾಗ ನೀವೇನು ಗಾಢ ನಿದ್ದೆಯಲ್ಲಿದ್ದಿರಾ? ಪ್ರಕರಣ ನಡೆದ 24 ಗಂಟೆಯೊಳಗಾಗಿ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಹೇಳಿಕೊಟ್ಟ ಮಾತು, ಬರೆದು ಕೊಟ್ಟ ಟ್ವೀಟು ಎಷ್ಟು ದಿನ ಬಾಳಿಕೆ ಬರುತ್ತದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ
ಮಾನ್ಯ ಸಿದ್ದರಾಮಯ್ಯನವರೇ, ಈ ಪ್ರಕರಣ ನಡೆದಾಗ ನೀವೇನು ಗಾಢ ನಿದ್ದೆಯಲ್ಲಿದ್ದಿರಾ?
ಪ್ರಕರಣ ನಡೆದ 24 ಗಂಟೆಯೊಳಗಾಗಿ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಹೇಳಿಕೊಟ್ಟ ಮಾತು, ಬರೆದು ಕೊಟ್ಟ ಟ್ವೀಟು ಎಷ್ಟು ದಿನ ಬಾಳಿಕೆ ಬರುತ್ತದೆ?#ದಲಿತವಿರೋಧಿಸಿದ್ದರಾಮಯ್ಯ pic.twitter.com/Jz6WYeZsHN
— BJP Karnataka (@BJP4Karnataka) December 31, 2021
ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಸಮುದಾಯದ ಮದುವೆಯ ಮನೆಯೊಂದರಲ್ಲಿ ಹಾಕಿದ್ದ ಡಿಜೆ ಶಬ್ಧಕ್ಕೆ ಕೆರಳಿದ ಕೋಟ ಠಾಣಾ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಲಾಠಿ ಚಾರ್ಜ್ ನಡೆಸಿ ರಾಕ್ಷಸರಂತೆ ವರ್ತಿಸಿದ್ದರು. ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ತವರಲ್ಲೇ ಇಂತಹ ಅಮಾನವೀಯ ಘಟನೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.