ಡಿಕೆಶಿ ಆಯ್ಕೆ ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು: ಬಿಜೆಪಿ

Advertisements

ನಿಮ್ಮ ಅಭ್ಯರ್ಥಿ ಕೂಡಾ ಖಾಲಿ ಜಾಗಕ್ಕೆ ಬೇಲಿ ಹಾಕಿ ಅಷ್ಟೊಂದು ಸಂಪಾದಿಸಿದ್ದೇ?

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭ್ಯರ್ಥಿ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು. ಒಂದೋ ಡಿಕೆಶಿ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು ಅಂತವರಿಗೆ ಸ್ಥಾನಮಾನ ಕೊಡುತ್ತಾರೆ ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

Advertisements

ಟ್ವೀಟ್‍ನಲ್ಲಿ ಏನಿದೆ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು! ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು. ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು. ಉದಾಹರಣೆಗೆ ಯುವ ಕಾಂಗ್ರೆಸ್ ಭಾವೀ ಅಧ್ಯಕ್ಷ ನಲಪಾಡ್ ಶಾಸಕರ ಕೊಲೆ ಸಂಚಿನ ಆರೋಪಿಗಳು, ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಅವರಂತವರು, ಇತ್ಯಾದಿ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಆಸ್ತಿ ಒಮ್ಮೆಲೆ ಏರಿಕೆ ಕಂಡಿತು. ಆಸ್ತಿಯ ಮೂಲ ತೋರಿಸದೆ ಐಟಿ ದಾಳಿ ಎದುರಿಸಿ ತಿಹಾರ್ ಜೈಲು ವಾಸ ಅನುಭವಿಸಿದರು. ಈಗ ಪರಿಷತ್ತಿಗೆ ಮತ್ತೊಬ್ಬ ಕುಬೇರ ಕೆಜಿಎಫ್ ಬಾಬುವನ್ನು ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್‌- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್‌ ಪತ್ತೆ!

Advertisements

ಡಿಕೆಶಿ ಅವರೇ, ನಿಮ್ಮ ಅಭ್ಯರ್ಥಿ ಕೂಡಾ ಖಾಲಿ ಜಾಗಕ್ಕೆ ಬೇಲಿ ಹಾಕಿ ಅಷ್ಟೊಂದು ಸಂಪಾದಿಸಿದ್ದೇ? ಸಭ್ಯರ ಮನೆ ಎಂದು ಪರಿಗಣಿಸಲ್ಪಡುವ ಪರಿಷತ್ ಪ್ರವೇಶಿಸಲು ತವಕದಿಂದಿರುವ ಪೊಲೀಸ್ ರೌಡಿಶೀಟರ್ ಕೆಜಿಎಫ್ ಬಾಬು ಅವರು ತಮ್ಮ ಆಸ್ತಿಯ ಅನಾರೋಗ್ಯಕರ ಪ್ರದರ್ಶನ ಮಾಡುವುದಕ್ಕಿಂತ ಆಸ್ತಿಯ ಮೂಲವನ್ನು ತೋರುವುದು ಸಕ್ರಮ ವಿಧಾನ. ಡಿಕೆಶಿ ನಿರ್ದೇಶಿತ ಸಿರಿವಂತ ಅಭ್ಯರ್ಥಿಗೆ ತಮ್ಮ ಆಸ್ತಿಯ ಮೂಲ ಹಾಗೂ ಗಳಿಕೆ ವಿಧಾನ ತಿಳಿಸಲು ಸಾಧ್ಯವೇ? ಕೆಪಿಸಿಸಿ ಅಧ್ಯಕ್ಷರ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಇದು ಶಿಕ್ಷಾರ್ಹ ಅಪರಾಧ. ಆಯೋಗಕ್ಕೆ 1,734 ಕೋಟಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿರುವ ಯೂಸುಫ್ ಅವರು ಸಾರ್ವಜನಿಕವಾಗಿ ಬೇರೆ ಬೇರೆ ಲೆಕ್ಕ ಕೊಡುತ್ತಿದ್ದಾರೆ. ನಿಮ್ಮ ಅಭ್ಯರ್ಥಿಯ ಆಸ್ತಿ ಮೌಲ್ಯ 4,000 ಕೋಟಿಯೋ 7,000 ಸಾವಿರ ಕೋಟಿಯೋ?. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

Advertisements

Advertisements
Exit mobile version