ಬೆಂಗಳೂರು: ಈಶ್ವರಪ್ಪನಿಗೆ ಸೆಟಲ್ಮೆಂಟ್ ಮಾಡುತ್ತೇನೆ ಎಂದು ಮಹಾನಾಯಕ ಈ ಹಿಂದೆ ಸವಾಲು ಹಾಕಿದ್ದರು ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.
Advertisement
ಟ್ವೀಟ್‍ನಲ್ಲಿ ಏನಿದೆ:
ಬೇನಾಮಿ ಅಧ್ಯಕ್ಷೆ” ಜೊತೆ ಸೇರಿ ಈ ರಿಂಗ್‍ಮಾಸ್ಟರ್ ಈ ಹಿಂದೆ ನಡೆಸಿದ ಷಡ್ಯಂತ್ರ ಎಲ್ಲರಿಗೂ ತಿಳಿದಿದೆ. ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 40% ಕಮಿಷನ್ ಪ್ರಹಸನದ ನಾಂದಿಗೀತೆ ಹಾಡಲಾಗಿತ್ತೇ?. ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು ಮಹಾನಾಯಕ ಹಲವು ಅಸ್ತ್ರ ಪ್ರಯೋಗಿಸಿದ್ದರು. ಹಿಜಬ್ ವಿರುದ್ಧ ಪ್ರತಿಭಟನೆ ಮಾಡಿದ ಯುವಕರಿಗೆ ಕೇಸರಿ ಪೇಟ ಕೊಟ್ಟಿದ್ದೇ ಈಶ್ವರಪ್ಪ ಎಂಬ ಆಪಾದನೆ. ಭಗವಾಧ್ವಜ ವಿಚಾರದಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ. ನಿನ್ನ ನೋಡ್ಕೋಳ್ತೀನಿ’ ಎಂದು ಸದನದಲ್ಲಿ ಬೆದರಿಕೆ. ಇದನ್ನೂ ಓದಿ: ಸಪ್ತಪದಿ ಯೋಜನೆಗೆ ಮರುಚಾಲನೆ ನೀಡಿದ ಶಶಿಕಲಾ ಜೊಲ್ಲೆ
Advertisement
ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು #ಮಹಾನಾಯಕ ಹಲವು ಅಸ್ತ್ರ ಪ್ರಯೋಗಿಸಿದ್ದರು.
√ ಹಿಜಾಬ್ ವಿರುದ್ಧ ಪ್ರತಿಭಟನೆ ಮಾಡಿದ ಯುವಕರಿಗೆ ಕೇಸರಿ ಪೇಟ ಕೊಟ್ಟಿದ್ದೇ ಈಶ್ವರಪ್ಪ ಎಂಬ ಆಪಾದನೆ.
√ ಭಗವಾಧ್ವಜ ವಿಚಾರದಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ.
— BJP Karnataka (@BJP4Karnataka) April 13, 2022
Advertisement
ಈಶ್ವರಪ್ಪಗೆ ಒಂದು ಸೆಟಲ್ಮೆಂಟ್ ಮಾಡುತ್ತೇನೆ ಎಂಬ ಪ್ರತೀಕಾರದ ಮಾತು. ಹೀಗಿರುವಾಗ, ಈ ವಿವಾದ ಮಹಾನಾಯಕನ ಸೆಟಲ್ಮೆಂಟ್ ರಾಜಕಾರಣದ ಭಾಗವೇ? ಗುತ್ತಿಗೆದಾರ ಬಿಜೆಪಿ ಕಾರ್ಯಕರ್ತ ಎಂದು ಆಪಾದಿಸುವ ಕಾಂಗ್ರೆಸ್ ನಾಯಕರೇ, ರಾಹುಲ್ ಗಾಂಧಿ ಸಹಿ ನಕಲಿ ಆರೋಪ ಈತನ ಮೇಲೆ ಇದ್ದಿದ್ದು ಸುಳ್ಳೇ?. ಈತ ಬೇನಾಮಿಅಧ್ಯಕ್ಷೆಯ ಸೂತ್ರದ ಗೊಂಬೆಯೇ?. ಇದನ್ನೂ ಓದಿ: ಈಶ್ವರಪ್ಪರನ್ನು ಸಮರ್ಥಿಸಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ ಸಚಿವ ಬಿ.ಸಿ ನಾಗೇಶ್
Advertisement