– ವಿಧಾನ ಪರಿಷತ್‌ನಲ್ಲಿ ದೊಡ್ಡ ಗಲಾಟೆ
ಬೆಳಗಾವಿ: SC-ST ಸಮುದಾಯಕ್ಕೆ ಮೀಸಲಿದ್ದ SCSP-TSP ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ದೊಡ್ಡ ಗಲಾಟೆ ನಡೆದಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನಾರಾಯಣಸ್ವಾಮಿ ಪ್ರಶ್ನೆ ಕೇಳಿದ್ರು. ಸರ್ಕಾರ ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ ಮಾಡಿದೆ. ನಮ್ಮ ಹಣ ಬಳಕೆ ಮಾಡಿದ್ದು ತಪ್ಪು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 7D ತೆಗೆಯೋದಾಗಿ ಹೇಳಿದ್ರು. ಆದರೆ 7D ರದ್ದು ಮಾಡಿಲ್ಲ. 11,500 ಕೋಟಿ ರೂ. SCSP-TSP ಹಣವನ್ನು ಗ್ಯಾರಂಟಿಗೆ ಕೊಡಲಾಗಿದೆ. ದಲಿತರ ಹಣ ಯಾಕೆ ಎಲ್ಲರಿಗೂ ಕೊಡ್ತಿದ್ದೀರಾ? ಶಕ್ತಿ ಯೋಜನೆಯಲ್ಲಿ ಹೇಗೆ ದಲಿತರಿಗೆ ಹಣ ಬಿಡುಗಡೆ ಆಗುತ್ತೆ? ಜಾತಿ ನೋಡಿ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಕೊಡ್ತೀರಾ. SCSP-TSP ಹಣ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಬಾರದು ಅಂತ ಆಗ್ರಹಿಸಿದರು.
Advertisement
Advertisement
ಇದಕ್ಕೆ ಸಚಿವ ಮಹದೇವಪ್ಪ ಉತ್ತರ ನೀಡಿ, 2013-14 ರಲ್ಲಿ SCSP-TSP ಹಣ ಬಳಕೆ ಮಾಡಿಕೊಳ್ಳಬಾರದು ಅನ್ನೋ ನಿಯಮ ಸಿದ್ದರಾಮಯ್ಯ ಅವರೇ ಜಾರಿ ಮಾಡಿದ್ರು. 7C, 7D, 7A, 7B ಅಂತ ನಿಯಮ ಆಗಿದೆ. ಇದರ ಅನ್ವಯ SC-ST ಜನರಿಗೆ ಹಣ ಹೋಗುತ್ತಿದೆ. 7C ನಿಯಮದ ಅನ್ವಯ ಗ್ಯಾರಂಟಿ ಯೋಜನೆಗೆ ಹಣ ಬಳಕೆ ಮಾಡಲಾಗಿದೆ. 7D ನಿಯಮವನ್ನು ನಿನ್ನೆಯ ಕ್ಯಾಬಿನೆಟ್‌ನಲ್ಲಿ ರದ್ದು ಮಾಡಲಾಗಿದೆ. ಮೊದಲು 7D ನಿಯಮದಲ್ಲಿ ಹಣ ದುರ್ಬಳಕೆ ಆಗುತ್ತಿತ್ತು. ಹೀಗಾಗಿ 7D ರದ್ದು ಮಾಡಲಾಗಿದೆ. SCSP-TSP ಹಣ ಅನ್ಯ ಉದ್ದೇಶಕ್ಕೆ ಬಳಕೆ ಆಗೊಲ್ಲ. 7D ರದ್ದು ಮಾಡಲಾಗಿದೆ. ಈ ಅಧಿವೇಶನದಲ್ಲಿ ಕಾಯ್ದೆ ತರುತ್ತೇವೆ ಅಂತ ತಿಳಿಸಿದರು.
Advertisement
ಸಚಿವರ ಉತ್ತರಕ್ಕೆ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗೆ ಹಣ ಬಳಕೆ ಸರಿಯಲ್ಲ. 11,500 ಕೋಟಿ ರೂ. ಹಣ SCSP-TSP ಖಾತೆಗೆ ವಾಪಸ್ ಹಾಕಬೇಕು. ನಮ್ಮ ಜನರಿಗೆ ಅನ್ಯಾಯ ಆಗಿದೆ. ನಮ್ಮ ಜನರ ಅಭಿವೃದ್ಧಿಗೆ ಮಾತ್ರ ಈ ಹಣ ಬಳಕೆ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ನಾನು ಈ ಉತ್ತರ ಒಪ್ಪೊಲ್ಲ ಎಂದರು.
Advertisement
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮಾತಾಡಿ, SCSP-TSP ಹಣವನ್ನು ವಿವಿಧ ಇಲಾಖೆಯ ಕಾರ್ಯಕ್ರಮಕ್ಕೆ ಬಳಕೆ ಮಾಡಿ SC-ST ಜನರಿಗೆ ಕೊಡಬೇಕು. ಗ್ಯಾರಂಟಿ ಯೋಜನೆಯ ಹಣ SC-ST ಜನರಿಗೆ ನೀಡಲಾಗ್ತಿದೆ. ಶಕ್ತಿ ಯೋಜನೆಯಲ್ಲಿ SCSP-TSP ಹಣ ಕೊಡಬೇಕಾದ್ರೆ SC-ST ಫಲಾನುಭವಿಗಳ ಮಾಹಿತಿ ಇರಬೇಕು. ಫಲಾನುಭವಿಗಳ ಮಾಹಿತಿ ಇಲ್ಲದೆ ಹಣ ಕೊಡೋಕೆ ಆಗೊಲ್ಲ ಎಂದರು. ಇದನ್ನೂ ಓದಿ: ಕಾರು ಖರೀದಿಸುವಷ್ಟು ಹಣವಿಲ್ಲ ಎಂದು ಬೈಕ್‌ನಲ್ಲೇ ಸದನಕ್ಕೆ ಬಂದ ಶಾಸಕ
ಸಚಿವ ಮಹಾದೇವಪ್ಪ ಮಾತಾಡಿ, ಈಗಾಗಲೇ ಕಾಯ್ದೆ ಇದೆ. ಹೀಗಾಗಿ SCSP-TSP ಹಣ ದುರುಪಯೋಗ ಆಗೊಲ್ಲ. ಗ್ಯಾರಂಟಿ ಯೋಜನೆಗೆ SC-ST ಅವರಿಗೆ ಬಿಟ್ಡು ಬೇರೆ ಅವರಿಗೆ ಹಣ ಬಿಡುಗಡೆ ಆಗೊಲ್ಲ. ನಿಯಮ ಪ್ರಕಾರವೇ ಹಣ ಖರ್ಚು ಮಾಡ್ತೀವಿ ಎಂದರು.
ಇದಕ್ಕೆ ಒಪ್ಪದ ನಾರಾಯಣಸ್ವಾಮಿ ಮತ್ತು ಬಿಜೆಪಿ ಸದಸ್ಯರು ಗ್ಯಾರಂಟಿ ಯೋಜನೆಗೆ ಹಣ ಬಿಡುಗಡೆ ವಿರೋಧಿಸಿ ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಗದ್ದಲ ಗಲಾಟೆ ಹಿನ್ನಲೆಯಲ್ಲಿ ಸಭಾಪತಿಗಳು ಕಲಾಪ 10 ನಿಮಿಷ ಕಾಲ ಮುಂದೂಡಿದರು.
ಬಳಿಕ ಕಲಾಪ ಪ್ರಾರಂಭ ಆದ ಮೇಲೂ ಸರ್ಕಾರ ಸರಿಯಾಗಿ ಉತ್ತರ ನೀಡಿಲ್ಲ ಅಂತ ಬಿಜೆಪಿ ಪ್ರತಿಭಟನೆ ಮುಂದುವರಿಸಿತು. ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ನಡೀತು. ಗದ್ದಲ ಗಲಾಟೆ ಹಿನ್ನಲೆ ಮತ್ತೆ ಕಲಾಪವನ್ನು ಸಭಾಪತಿಗಳು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು. ಬಳಿಕ ಸದನ ಪ್ರಾರಂಭವಾದಾಗಲೂ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ನಡೀತು. ಪರಸ್ಪರ ಸದಸ್ಯರು ಘೋಷಣೆ ಮಾಡಿದ್ರು. ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು ಸೋಮವಾರ ಈ ವಿಷಯ ಚರ್ಚೆ ಮಾಡಲು ಅರ್ಧ ಗಂಟೆ ಕಾಲ ಅವಕಾಶ ಕೊಡೋದಾಗಿ ತಿಳಿಸಿದರು. ಸಭಾಪತಿ ಭರವಸೆ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ವಾಪಸ್ ಪಡೆದರು. ಇದನ್ನೂ ಓದಿ: ಮೋಡ ಬಿತ್ತನೆಗೆ ಸರ್ಕಾರ ಹಣ ಕೊಡದಿದ್ರೆ ನಾನೇ ಮಾಡಿಸ್ತೀನಿ: ಪ್ರಕಾಶ್ ಕೋಳಿವಾಡ