ವಿಜಯನಗರ(ಬಳ್ಳಾರಿ): ನೂತನ ವಿಜಯನಗರ ಜಿಲ್ಲೆಯಾದ ಬಳಿಕ ಇದೇ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿದೆ. ಮುಂದಿನ ವರ್ಷ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕಾರಣಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಮಿಷನ್ 150 ಟಾರ್ಗೆಟ್ ಪಿಕ್ಸ್ ಮಾಡಿದ್ದು, ಟಾರ್ಗೆಟ್ ರೀಚ್ ಆಗಲು, ಬಿಜೆಪಿ ಹಿಂದುತ್ವದ ಮೊರೆ ಹೋಗುವ ಸಾಧ್ಯತೆ ಇದೆ. ಹಿಂದುತ್ವದ ಅಜೆಂಡಾ ಮೇಲೆ ಚುನಾವಣೆಗೆ ಹೋಗಲು ನಿರ್ಧಾರ ಮಾಡಲಾಗಿದೆ.
Advertisement
2023ರ ಚುನಾವಣೆಯಲ್ಲಿ 150+ ಸ್ಥಾನ ಗೆಲ್ಲುವ ಗುರಿಯ ಸಂಕಲ್ಪದೊಂದಿಗೆ ಎರಡು ದಿನಗಳ ಕಾಲದ ರಾಜ್ಯ ಕಾರ್ಯಕಾರಿಣಿ ಸಭೆಗೆ ಐತಿಹಾಸಿಕ ಪ್ರಸಿದ್ಧ ವಿಜಯನಗರ ಸಾಕ್ಷಿ ಆಗಿದೆ. ಮುಂಬರುವ ಚುನಾವಣೆಗೆ ತಂತ್ರ- ಪ್ರತಿತಂತ್ರ, ವಿಪಕ್ಷಗಳನ್ನು ಎದುರಿಸುವ ರಣತಂತ್ರ ಹೇಗಿರಬೇಕು?, ಪಂಚರಾಜ್ಯ ಚುನಾವಣೆಯಲ್ಲಿ ಯಾವ ರೀತಿ ಗೆದ್ದಿದ್ದೇವೆ. ಅದೇ ಮಾದರಿಯನ್ನು ಇಲ್ಲೂ ಅಳವಡಿಸಬೇಕು ಎಂಬ ಬಗ್ಗೆ ಕಾರ್ಯಕರ್ತರಿಗೆ ತಿಳಿಸಲಾಯ್ತು. 150+ ಸ್ಥಾನಗಳನ್ನು ಗೆಲ್ಲಲು ರೋಡ್ ಮ್ಯಾಪ್ ಮಾಡಿ ಕೊಡಲಾಯ್ತು. ಉತ್ತರ ಪ್ರದೇಶದ ಚುನಾವಣೆ ಮಾದರಿಯಲ್ಲಿ ಚುನಾವಣೆ ಮಾಡಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಲಾಯ್ತು. ಹಿಂದುತ್ವ ಅಜೆಂಡಾ ಮೇಲೆ ಚುನಾವಣೆ ನಡೆಸಲು ನಿರ್ಧಾರ ಮಾಡಲಾಗಿದೆ.
Advertisement
Advertisement
ಈಗಾಗಲೇ ನಿರ್ಧಾರ ಮಾಡಿದಂತೆ 150 ಸೀಟ್‍ಗಳನ್ನು ಗೆಲ್ಲಲು, ಹಿಂದುತ್ವದ ಫೈರ್ ಬ್ರಾಂಡ್‍ಗಳಿಗೆ ಮತ್ತೆ ಮಣೆ ಹಾಕುವ ಸಾಧ್ಯತೆ ಇದೆ. ಹಿಂದುತ್ವದ ಅಜೆಂಡಾ ಮೇಲೆ ಚುನಾವಣೆ ನಡೆಸಲು ನಿರ್ಧಾರ ಮಾಡಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಪಕ್ಷ ಸಂಘಟಿಸಲು, ಕೆ.ಎಸ್.ಈಶ್ವರಪ್ಪ ಬೆಂಬಲಕ್ಕೆ ನಿಲ್ಲುವ, ಪರ್ಸಂಟೇಜ್ ಸರ್ಕಾರ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ತಕ್ಕ ಉತ್ತರ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಉಪಚುನಾವಣಾ ಫಲಿತಾಂಶ, ಬಿಜೆಪಿಗೆ ಮುಖಭಂಗ – ಕಾಂಗ್ರೆಸ್, ಟಿಎಂಸಿಗೆ ಜಯ
Advertisement
ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿರುವುದರಿಂದ, ಹೆಚ್ಚಿನ ಕಾವು ಅಥವಾ ಒಳ ರಾಜಕೀಯ ತಿಕ್ಕಾಟಕ್ಕೆ ಆಸ್ಪದ ನೀಡದೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮೊದಲ ದಿನ ಮುಕ್ತಾಯವಾಗಿದೆ. ರಾಜ್ಯ ಮಟ್ಟದ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಹಾಗೂ ಗೆಲುವಿನ ಜಪದೊಂದಿಗೆ ಕಾರ್ಯಕಾರಣಿಯಲ್ಲಿ ಭಾಗಿಯಾಗಿದ್ದರು. ಇದು ಮುಂಬರುವ ಚುನಾವಣೆ ಸಿದ್ಧತೆಯ ಸಭೆಯಂತಿತ್ತು.