ರಾಮನಗರ: ನಿಖಿಲ್ (Nikhil Kumaraswamy), ವಿಜಯೇಂದ್ರ (Vijayendra) ಇಬ್ಬರೂ ಸಹೋದರ ಮನೋಭಾವದಲ್ಲಿ ಒಟ್ಟಾಗಿ ಹೋಗ್ತಾರೆ. ಉತ್ತಮ ಬಾಂಧವ್ಯದೊಂದಿಗೆ ಚುನಾವಣೆಯಲ್ಲಿ ತೊಡಗಿಸಿಕೊಳ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದರು.
ಬಿಡದಿಯಲ್ಲಿರುವ ಹೆಚ್‌ಡಿಕೆ ತೋಟದ ಮನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ಭೇಟಿ ನೀಡಿದರು. ಹೆಚ್‌ಡಿಕೆಗೆ ಹೂಗುಚ್ಛ ನೀಡಿದರು. ಈ ವೇಳೆ ಇಬ್ಬರೂ ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಇದನ್ನೂ ಓದಿ: ಜನ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ – ಶ್ರೀರಾಮುಲು
Advertisement
Advertisement
ವಿಜಯೇಂದ್ರ ಭೇಟಿ ಕುರಿತು ಮಾತನಾಡಿದ ಹೆಚ್‌ಡಿಕೆ, ಬಹಳ ದಿನಗಳ ಹಿಂದೆಯೇ ವಿಜಯೇಂದ್ರ ಭೇಟಿ ಮಾಡಬೇಕಿತ್ತು. ಹಲವಾರು ಕಾರ್ಯಕ್ರಮಗಳು ಇದ್ದ ಕಾರಣ ಆಗಿರಲಿಲ್ಲ. ಇವತ್ತು ನಮ್ಮ ಭೇಟಿಯ ಉದ್ದೇಶ ರಾಜ್ಯದ ಅಭಿವೃದ್ಧಿ ದೃಷ್ಟಿ. ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಮಾತಾಡಿಲ್ಲ. ಆ ಬಗ್ಗೆ ಕೇಂದ್ರ ನಾಯಕರು ಕೂತು ಚರ್ಚೆ ಮಾಡ್ತಾರೆ ಎಂದು ಹೇಳಿದರು.
Advertisement
ಯುವ ರಾಜ್ಯಾಧ್ಯಕ್ಷರ ನೇಮಕದಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ. ಅದಕ್ಕಾಗಿ ವಿಜಯೇಂದ್ರ ಅವರು ಶ್ರಮ ಹಾಕುತ್ತಿರುವುದನ್ನ ನೋಡ್ತಿದ್ದೇನೆ. 2006-07 ರಲ್ಲಿ ಯಡಿಯೂರಪ್ಪ, ನಾನು ಸರ್ಕಾರ ನಡೆಸಿದ್ದೆವು. ಇವತ್ತೂ ಸಹ ಅಂತಹ ಸರ್ಕಾರ ಬರಬೇಕು ಅನ್ನೋದು ಜನರ ಅಭಿಪ್ರಾಯ ಇದೆ. ಅವತ್ತು ನಾವು ಅಭಿವೃದ್ಧಿ ಫೌಂಡೇಷನ್ ಕೊಟ್ಟಿದ್ದೆವು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಜಾತಿ ಜನಗಣತಿ ವರದಿ ಅವೈಜ್ಞಾನಿಕ – ಯಾವುದೇ ಮನೆಬಾಗಿಲಿಗೆ ಹೋಗಿ ಮಾಡಿಲ್ಲ: ಆರಗ ಜ್ಞಾನೇಂದ್ರ
Advertisement
ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ವಿಚಾರವಾಗಿ ಮಾತನಾಡಿ, ಜನತಾ ದರ್ಶನಕ್ಕೆ ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದಾರೆ. ನಾವು ಅಂದೇ ಜನತಾ ದರ್ಶನ ಯಶಸ್ವಿಯಾಗಿ ಮಾಡಿ ತೋರಿಸಿದ್ದೆವು. ಈಗ ಕೇವಲ ಪ್ರಚಾರದ ಕೆಲಸ ಅಷ್ಟೇ ಎಂದು ಲೇವಡಿ ಮಾಡಿದರು.
ಹೆಚ್ಡಿಕೆ ಭೇಟಿ ಕುರಿತು ಮಾತನಾಡಿದ ವಿಜಯೇಂದ್ರ, ದೆಹಲಿಯಲ್ಲಿ ಕೂತು ಚರ್ಚೆ ಮಾಡಿದ ನಂತರ ರಾಜ್ಯದ ಹಿತದೃಷ್ಟಿಯಿಂದ ಹೊಂದಾಣಿಕೆ ಆಗಿ ಸಾಕಷ್ಟು ದಿನಗಳು ಕಳೆದಿವೆ. ದೇಶದ ಮಾಜಿ ಪ್ರಧಾನಿ ದೇವೇಗೌಡರನ್ನು ಸಹ ಭೇಟಿ ಮಾಡಿ ಚರ್ಚೆ ಮಾಡಿದ್ದೆ. ಇದೀಗ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲಬೇಕು. ರೈತ ವಿರೋಧಿ, ರಾಜ್ಯ ವಿರೋಧಿ ಈ ಸರ್ಕಾರಕ್ಕೆ ಬುದ್ದಿ ಕಲಿಸಬೇಕು. ಆ ನಿಟ್ಟಿನಲ್ಲಿ ಕೂತು ಎಲ್ಲಾ ವಿಚಾರ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ
ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರದ ಬಗ್ಗೆ ನಮ್ಮ ಕೇಂದ್ರ ನಾಯಕರು ಮಾತಾಡುತ್ತಾರೆ. ನಮ್ಮಲ್ಲಿ ಏನೇ ಗೊಂದಲ ಇದ್ರೂ ಕೂಡ ಬಗ್ಗೆ ಚರ್ಚೆ ಮಾಡ್ತೀವಿ. ನಮ್ಮ ಗುರಿ ಇರೋದು ಮತ್ತೊಮ್ಮೆ ದೇಶದ ಪ್ರಧಾನಿ ಆಗಿ ನರೇಂದ್ರ ಮೋದಿಯವರನ್ನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.