ಖಾತೆ ಟೆನ್ಶನ್ ಒಂದ್ಕಡೆ, ಇನ್ನೊಂದೆಡೆ ಮಿತ್ರ ಮಂಡಳಿಯಲ್ಲಿ ಬಿರುಕು..!

Public TV
1 Min Read
CABINET BSY 2 copy

ಬೆಂಗಳೂರು: ಮಿತ್ರಮಂಡಳಿ ಏಕೋ ಏನೋ ಸ್ವಲ್ಪ ಅಸಮಾಧಾನಗೊಂಡಿದೆ. ಅದು ಯಡಿಯೂರಪ್ಪ ಕಾರಣಕ್ಕೆ ಅಲ್ಲ. ಮಿತ್ರಮಂಡಳಿಯ ಸದಸ್ಯರಲ್ಲೇ ಅಸಮಾಧಾನಗೊಂಡಿರುವುದು. ಪ್ರಮಾಣವಚನಕ್ಕೆ ಎಂಟಿಬಿ ನಾಗರಾಜ್ ಗೈರು ಆಗಿರೋದೇ ಈಗ ದೊಡ್ಡ ಚರ್ಚೆ. ಅಂದಹಾಗೆ ಈ ಚರ್ಚೆ ಮಿತ್ರಮಂಡಳಿಯ ಸದಸ್ಯರಲ್ಲೇ ಹೆಚ್ಚಾಗಿದೆ.

ವಿಧಾನಸೌಧದಲ್ಲಿ ಇವತ್ತು ಬಿಬಿಎಂಪಿಯ ಕಾರ್ಯಕ್ರಮವಿತ್ತು. ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಕೂಡ ಬಂದಿದ್ರು. ಇದೇ ವೇಳೆ ನೂತನ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಗೋಪಾಲಯ್ಯ ಕೂಡ ಆಗಮಿಸಿದ್ರು. ಆಗ ವಸತಿ ಸಚಿವ ಸೋಮಣ್ಣ ನೂತನ ಸಚಿವರಿಗೆ ಸಿಗ್ತಾರೆ. ಅನೌಪಚಾರಿಕವಾಗಿ ಮಾತನಾಡುವಾಗ ಎಂಟಿಬಿ ನಾಗರಾಜ್ ಗೈರಿನ ವಿಚಾರ ಪ್ರಸ್ತಾಪವಾಗುತ್ತೆ. ಎಂಟಿಬಿ ನಾಗರಾಜ್ ಪ್ರಮಾಣ ವಚನಕ್ಕೆ ಬಾರದಿದ್ದಕ್ಕೆ ಮಿತ್ರಮಂಡಳಿಯ ಬೈರತಿ ಬಸವರಾಜ್, ಎಸ್. ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಸೋಮಣ್ಣ ಎದುರು ಅಸಮಾಧಾನ ಹೊರಹಾಕಿದ ಇಬ್ಬರು ಸಚಿವರು, ನಾವು ಎಲ್ಲ ಜತೆಗಿದ್ದವು, ನಮ್ ಪ್ರಮಾಣ ವಚನಕ್ಕೆ ಬರಬೇಕಿತ್ತು. ಆದ್ರೆ ಬರಲಿಲ್ಲ, ಹಂಗೆ ಇರಲಿ ಬಿಡಿ ಎಂದು ಎಸ್.ಟಿ.ಎಸ್, ಬೈರತಿ ಬಸವರಾಜು ಹೇಳ್ತಾರೆ. ಆಗ ಸೋಮಣ್ಣ.. ನಾವೇ ಅವರ ಮನೆಗೆ ಹೋಗೋಣ ಬಿಡ್ರಪ್ಪ. ಅಧಿಕಾರ ನಮ್ಗೆ ಇದೆ, ಅವರಿಗೆ ಪಾಪ ಇಲ್ಲ. ನೋವಾಗಿರುತ್ತೆ ಅಂತಾ ಅವರಿಬ್ಬರನ್ನು ಸಮಾಧಾನಪಡಿಸ್ತಾರೆ.

MTB

ಇನ್ನೊಂದೆಡೆ ಖಾತೆ ಬಗ್ಗೆ ಸಚಿವರಾದವರಿಗೆ ಕುತೂಹಲ ಹೆಚ್ಚಾಗಿದೆ. ಕೇಳಿದ ಖಾತೆ ಸಿಗುತ್ತಾ ಎಂಬ ಕುತೂಹಲದಲ್ಲಿ ನೂತನ ಸಚಿವರಿದ್ದಾರೆ. ವಿಧಾನಸೌಧದಲ್ಲಿ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ನಮ್ಗೆ ಒಳ್ಳೆ ಖಾತೆ ಸಿಗುತ್ತಾ? ಎಂದು ಸಚಿವ ಸೋಮಣ್ಣರನ್ನ ಕೇಳ್ತಾರೆ. ನಾವು ಕಾಂಗ್ರೆಸ್‍ನಿಂದ ಬಿಟ್ಟು ಬಂದವರು ಮಾರ್ಯಾದೆ ಪ್ರಶ್ನೆ ಅಂತಾ ಬೈರತಿ ಬಸವರಾಜು ಹೇಳ್ತಾರೆ. ಆಗ ಸೋಮಣ್ಣ ಪ್ರತಿಕ್ರಿಯಿಸಿ, ಅಯ್ಯೋ ನಾನು ಆ ಪಕ್ಷ ಬಿಟ್ಟು ಬಂದವ್ನು ಅಲ್ವಾ. ಒಳ್ಳೆಯ ಖಾತೆ ಸಿಗುತ್ತೆ ಎಂದ್ರು.

Share This Article
Leave a Comment

Leave a Reply

Your email address will not be published. Required fields are marked *