ಹಾವೇರಿ: ಜಿಲ್ಲೆ ಬ್ಯಾಡಗಿ ಪುರಸಭೆಯಲ್ಲಿ ದಿಢೀರ್ ಬೆಳವಣಿಗೆಯೊಂದರಲ್ಲಿ ಪುರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯ ಕಲಾವತಿ ಮೌನೇಶ ಬಡಿಗೇರ ರಾಜೀನಾಮೆ ಸಲ್ಲಿಸಿದ್ದಾರೆ.
ನಿನ್ನೆಯಷ್ಟೇ ನಡೆದ ಸಾಮಾನ್ಯ ಸಭೆ ಮುಕ್ತಾಯದ ಬಳಿಕ ರಾಜೀನಾಮೆ ಪತ್ರವನ್ನು ಬೆಂಗಳೂರು ಮುಖ್ಯಾಧಿಕಾರಿ ಏಸು ಅವರ ಮೂಲಕ ಹಾವೇರಿ ಉಪವಿಭಾಗಾಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದರು. ಪಟ್ಟಣದ 1ನೇ ವಾರ್ಡ್‍ನಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಅವರು, ಮೊದಲ 30 ತಿಂಗಳ ಅವಧಿಯಲ್ಲಿ ಪುರಸಭೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಳೆದ 15 ತಿಂಗಳಿಂದ ಪುರಸಭೆ ಉಪಾಧ್ಯಕ್ಷೆಯಾಗಿ, ಕೆಲಕಾಲ ಹಂಗಾಮಿ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದರು. ಇದನ್ನೂ ಓದಿ: ನನ್ನ ಸುದ್ದಿಗೆ ಬಂದ್ರೆ ಕೈ-ಕಾಲು ಮುರಿತೀನಿ, ತಲೆ ತೆಗೆಯೋಕೆ ರೆಡಿ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್ಚರಿಕೆ
Advertisement
Advertisement
30 ತಿಂಗಳ ಅವಧಿಗೆ ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಇವರು ಅಧಿಕಾರವಧಿ ಮುಗಿದ ನಂತರವೂ ಅಧಿಕಾರ ನಡೆಸುತ್ತಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಈ ಪರಿಣಾಮ ಸ್ವತಃ ಕಲಾವತಿ ಅವರೇ ಹೋಗಿ ಇಂದು ರಾಜೀನಾಮೆ ಕೊಟ್ಟಿದ್ದಾರೆ.
Advertisement
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಲಾವತಿ ಅವರು, ಮೊದಲ ಬಾರಿಗೆ ಪುರಸಭೆ ಪ್ರವೇಶಿಸಿದ ನನಗೆ ಮೊದಲ ಅವಧಿಯಲ್ಲೇ ಉಪಾಧ್ಯಕ್ಷೆಯಾಗಿ ಕೆಲಸ ನಿರ್ವಹಿಸುವ ಭಾಗ್ಯ ದೊರೆಯಿತು. ಒದಗಿ ಬಂದಂತಹ ಅಲ್ಪ ಅವಧಿಯಲ್ಲೇ ಸರ್ಕಾರಕ್ಕೆ, ಇಲಾಖೆಗೆ ಮತ್ತು ಉಪಾಧ್ಯಕ್ಷೆ ಕೆಲಸಕ್ಕೆ ಕಪ್ಪುಚುಕ್ಕೆ ಬರದಂತೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ನನ್ನ ಕೆಲಸಕ್ಕೆ ಸಹಕರಿಸಿದ ಬಿಜೆಪಿ ತಾಲೂಕು ಘಟಕ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗೆ ಅಭಾರಿಯಾಗಿದ್ದೇನೆ ಎಂದಿದ್ದಾರೆ. ಈ ವೇಳೆ ಅಧ್ಯಕ್ಷೆ ಸರೋಜಾ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ