Connect with us

Bollywood

ಪದ್ಮಾವತಿ ಸಿನಿಮಾ ಬ್ಯಾನ್ ಮಾಡೋದು ಸೂಕ್ತ ಎಂದ ಬಿಜೆಪಿ

Published

on

ಗಾಂಧಿನಗರ: ಭಾರತೀಯ ಸಿನಿಮಾ ಲೋಕದ ಬಹು ನಿರೀಕ್ಷಿತ ಚಿತ್ರ ಎಂದು ಹೇಳಲಾಗುವ `ಪದ್ಮಾವತಿ’ಯ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ಗುಜರಾತಿನ ಹಿರಿಯ ನಾಯಕ ಶಂಕರ್ ಸಿನ್ಹ ವಾಘೇಲಾ ಸಿನಿಮಾದ ವಿರುದ್ಧ ಹರಿಹಾಯ್ದಿದ್ದರು. ಆದರೆ ಇದೀಗ ಸ್ಥಳೀಯ ಬಿಜೆಪಿ ಸಿನಿಮಾವನ್ನು ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಅಥವಾ ಬ್ಯಾನ್ ಮಾಡವುದು ಸೂಕ್ತ ಎಂದು ತಿಳಿಸಿದೆ.

ಬಿಡುಗಡೆಗೂ ಮುನ್ನ ನಮಗೆ ನಮಗೆ ಪ್ರತ್ಯೇಕವಾಗಿ ಸಿನಿಮಾ ತೋರಿಸಬೇಕು. ಇದರಿಂದ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ದೃಶ್ಯಗಳಿಲ್ಲ ಎಂಬುವುದು ಖಚಿತವಾಗುತ್ತದೆ. ಇದರಿಂದ ವಿಧಾನಸಭೆ ಕ್ಷೇತ್ರದ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಶಾಂತಿ ನೆಲಸುವಂತೆ ಆಗುತ್ತದೆ ಎಂದು ಸ್ಥಳೀಯ ರಜಪೂತ ನಾಯಕರು ಚುನಾವಣಾ ಆಯೋಗ ಮತ್ತು ಗುಜರಾತ ಚುನಾವಣಾ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಪದ್ಮಾವತಿ ಸಿನಿಮಾವನ್ನು ಗುಜರಾತಿನಲ್ಲಿ ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಇಲ್ಲವೇ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡೋದು ಒಳ್ಳೆಯದು. ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಮುಖಂಡರು ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚಾಗಿರುವುದರಿಂದ ಸಿನಿಮಾದಿಂದಾಗಿ ಗಲಾಟೆಗಳು ಉಂಟಾಗಬಹುದು. ಒಂದು ವೇಳೆ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರೆ ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಜನತೆಯ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಬಿಜೆಪಿ ವಕ್ತಾರ ಜಡೇಜಾ ತಿಳಿಸಿದ್ದಾರೆ.

ಇದನ್ನೂ ಓದಿ: ಪದ್ಮಾವತಿ ರಂಗೋಲಿ ವಿವಾದ- 48 ಗಂಟೆ ಸಮಯದಲ್ಲಿ ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಆರೋಪಿಗಳ ಅರೆಸ್ಟ್

ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

ಸಿನಿಮಾದಲ್ಲಿ ಯವುದೇ ರೀತಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟಣೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಎಲ್ಲರನ್ನು ಸೆಳೆಯಲಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ. ಪದ್ಮಾವತಿ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

ಗುಜರಾತ್ ನಲ್ಲಿ ಡಿಸೆಂಬರ್ 9ರಂದು ಮೊದಲ ಹಂತದ ಚುನಾವಣೆ ನಡೆದರೆ, ಡಿಸೆಂಬರ್ 18 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

Click to comment

Leave a Reply

Your email address will not be published. Required fields are marked *