ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಯಾವಾಗಲೂ ಹಿಂದುತ್ವ, ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ. ಅಲ್ಲದೇ ಅವರ ಬಗ್ಗೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಾರೆ. ಹಾಗಾಗಿ ಕಂಗನಾ ರಾಜಕೀಯ ಮಾತನಾಡಿದಾಗೆಲ್ಲ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾದಷ್ಟೇ ರಾಜಕೀಯ (Politics) ಕ್ಷೇತ್ರದ ಮೇಲೂ ಒಲವು ಇಟ್ಟುಕೊಂಡಿರುವ ಕಂಗನಾ, ಬಿಜೆಪಿ ಬಿಟ್ಟು ಉಳಿದೆಲ್ಲ ಪಕ್ಷಗಳ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಅದರಲ್ಲೂ ಮಹಾರಾಷ್ಟ್ರದ ಶಿವಸೈನ್ಯ ಮತ್ತು ಉದ್ಬವ್ ಠಾಕ್ರೆ ಸರಕಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಹೀಗಾಗಿ ಕಂಗನಾರನ್ನು ಬಿಜೆಪಿಯ (BJP) ಸದಸ್ಯೆ ಎಂದೂ ಲೇವಡಿ ಮಾಡಲಾಗುತ್ತಿತ್ತು. ಈ ನಡುವೆಯಂತೂ ಅವರು ರಾಜಕಾರಣದ ಬಗ್ಗೆ ವಿಪರೀತ ಮಾತನಾಡುತ್ತಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್
ಹೆಚ್ಚೆಚ್ಚು ರಾಜಕಾರಣದ ಬಗ್ಗೆ ಮಾತನಾಡುತ್ತಿರುವಂತೆಯೇ ಕಂಗನಾ ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತೂ ಹರಿದಾಡುತ್ತಿವೆ. ಈ ಕುರಿತು ಸ್ವತಃ ಕಂಗನಾ ರಣಾವತ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತಮ್ಮ ರಾಜಕಾರಣದ ಒಲವಿನ ಬಗ್ಗೆಯೂ ಅವರು ಮಾತನಾಡಿದ್ದಾರೆ. ತಮಗೆ ರಾಜಕೀಯ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಇರುವುದಾಗಿಯೂ ಅವರು ತಿಳಿಸಿದ್ದಾರೆ.
ನನಗೆ ರಾಜಕೀಯ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಇರುವುದು ನಿಜ. ಆದರೆ, ಯಾವುದೇ ಪಕ್ಷವನ್ನು ಸೇರಲಾರೆ. ನನ್ನ ಆದ್ಯತೆ ಸಿನಿಮಾ. ಸಿನಿಮಾದಲ್ಲೇ ರಾಜಕೀಯ ಕುರಿತಾದ ವಿಷಯಗಳು ಮತ್ತು ಬಯೋಪಿಕ್ ನಲ್ಲಿ ನಟಿಸುವ ಆಸೆ ಇದೆ. ಅದರ ಹೊರತಾಗಿಯೇ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳಲಾರೆ ಮತ್ತು ಭಾಗಿ ಆಗಲಾರೆ ಎಂದಿದ್ದಾರೆ ಕಂಗನಾ.