ಬೆಂಗಳೂರು: ಒಂದೆಡೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದ್ದರೆ, ಮತ್ತೊಂದೆಡೆ ಬಿಜೆಪಿ ಸಹ ಹೋರಾಟದ ಹಾದಿಗೆ ಇಳಿದಿದೆ. ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ನಾಳೆ 11:30 ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡೋದಾಗಿ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ತಾವು ಕ್ಲೀನ್ ಕ್ಲೀನ್ ಅಂತಾರೆ. ಅದೇನು ಕ್ಲೀನೋ? ಕಳೆದ ಸಲ ಸಿದ್ದರಾಮಯ್ಯ ವಿರುದ್ಧ 65 ಕೇಸ್ ಇದ್ವು. ಅವುಗಳನ್ನೆಲ್ಲ ಎಸಿಬಿ ಮೂಲಕ ಮುಚ್ಚಿ ಹಾಕಿಸಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದನ್ನು ಕಾಂಗ್ರೆಸ್‌ನವ್ರು ಸ್ವಾಗತ ಮಾಡಬೇಕಿತ್ತು. ಅವರು ತಾವು ಕ್ಲೀನ್ ಅಂತಾರಲ್ಲ. ತನಿಖೆ ನಡೆಯಲಿ ಅಂತಾ ಸ್ವಾಗತ ಮಾಡಬೇಕಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದೆ. ಯಾವ ನೈತಿಕತೆ ಇಟ್ಕೊಂಡು ಸಿದ್ದರಾಮಯ್ಯ ಪರ ನಿಲ್ತಾರೆ..? ನಾಳೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾವು ಪ್ರತಿಭಟನೆ ಮಾಡ್ತೇವೆ. ಜೆಡಿಎಸ್ ಶಾಸಕರು ಕಳಿಸುವಂತೆ ಹೆಚ್ಡಿಕೆ ಜತೆಗೂ ಮಾತಾಡಿದ್ದೇನೆ ಎಂದು ಅಶೋಕ್ ಹೇಳಿದರು. ಇದನ್ನೂ ಓದಿ: ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ; ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರೋದು ನಿಜ – ಪರಮೇಶ್ವರ್
Advertisement
Advertisement
ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ರಾಜೀನಾಮೆ ಕೊಡಿ ಅಂತಾ ಸಿದ್ದರಾಮಯ್ಯ ಆಗ್ರಹ ಮಾಡಿದರು. ಈಗ ಸಿದ್ದರಾಮಯ್ಯ ಏನು ಮಾಡ್ತಿದ್ದಾರೆ? ಅವರು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
Advertisement
Advertisement
ಕಾಂಗ್ರೆಸ್ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದ ಅಶೋಕ್, ರಾಜ್ಯಪಾಲರ ಕಟೌಟ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ. ನಮ್ಮ ಪ್ರತಿಭಟನೆಗೆ ದೂರು ದಾಖಲು ಮಾಡುವ ಪೊಲೀಸರು ಈಗ ಕೈ ಕಟ್ಟಿ ಕೂತಿದ್ದಾರೆ. ರಾಜ್ಯಾಂಗದ ಮುಖ್ಯಸ್ಥರ ಕಟೌಟ್‌ಗೆ ಬೆಂಕಿ ಹಚ್ಚಿದ್ರೂ ಕ್ರಮ ಇಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ ನಿಂತಿರುವ ಅನುಮಾನ ಮೂಡಿಸುತ್ತಿದೆ: ವಿಜಯೇಂದ್ರ ಕಿಡಿ