ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ (BJP-JDS Alliance) ಎರಡು ಪಕ್ಷದ ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ (Congress) ಸೇರ್ಪಡೆ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನೇಕ ಬಿಜೆಪಿ-ಜೆಡಿಎಸ್ ನಾಯಕರು ದೋಸ್ತಿಗೆ ಅಸಮಾಧಾನ ವ್ಯಕ್ತಪಡಿಸಿ ನನ್ನ ಬಳಿ ಮಾತನಾಡಿದ್ದಾರೆ. ನಾನು ಸಿಎಂ, ಮಂತ್ರಿಗಳು, ಪ್ರಮುಖ ನಾಯಕರು ಈ ಬಗ್ಗೆ ಕುಳಿತು ಮಾತಾಡಬೇಕಿದೆ. ಚರ್ಚೆ ಮಾಡಿ ಅಸಮಾಧಾನ ಇರೋರ ಜೊತೆ ನಾನು ಮಾತನಾಡುತ್ತೇನೆ ಎಂದರು.
Advertisement
Advertisement
ಬಹಳಷ್ಟು ನಾಯಕರು ಕಾಂಗ್ರೆಸ್‌ಗೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಮೈತ್ರಿಗೆ ಸಮಾಧಾನ ಇಲ್ಲ ಅಂತ ಚುನಾವಣೆಯಲ್ಲಿ ಗೆದ್ದವರು, ಸೋತವರು ನಮ್ಮ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲು ನಾನು ನಮ್ಮಲ್ಲಿ ಮಾತನಾಡುತ್ತೇನೆ. ಬಳಿಕ ಸೇರ್ಪಡೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ- ಧ್ರುವ ಸರ್ಜಾ
Advertisement
Advertisement
ಕಾರ್ಯಕರ್ತರ ಮಟ್ಟದಲ್ಲಿ ಸೇರ್ಪಡೆ ಮಾಡಿಕೊಳ್ಳಿ ಎಂದು ಈಗಾಗಲೇ ಹೇಳಿದ್ದೇನೆ. ಶಾಸಕರ ಮಟ್ಟದಲ್ಲಿ ನಾವು ಮಾತಾಡುತ್ತೇವೆ. ಶಾಸಕರು ಬಂದರೆ ಪಕ್ಷಾಂತರ ಕಾಯ್ದೆ, ಟೆಕ್ನಿಕಲ್ ಪಾಯಿಂಟ್ ಬಗ್ಗೆ ನಮಗೂ ಗೊತ್ತಿದೆ. ಸದ್ಯ ಬಂದ್, ಕಾವೇರಿ ವಿಚಾರ ಇದೆ. ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಎಲ್ಲಾ ಮುಗಿದ ಮೇಲೆ ಚರ್ಚೆ ಮಾಡೋದಾಗಿ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ ಭಾರೀ ಪ್ರಮಾಣದಲ್ಲಿ ಹೆಚ್ಚಳ
Web Stories