ರಾಮನಗರ: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಕುರಿತು ಚನ್ನಪಟ್ಟಣದ (Channapatna) ಮಾಕಳಿ ಗ್ರಾಮದಲ್ಲಿ ಸಂಸದ ಡಿ.ಕೆ.ಸುರೇಶ್ (D.K.Suresh) ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಆ ಪಕ್ಷಗಳ ವೈಯಕ್ತಿಕ ವಿಚಾರ. ಅವರು ಏನೇ ತೀರ್ಮಾನ ಮಾಡಿ ಮೈತ್ರಿ ಮಾಡಿಕೊಂಡರೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ (Congress) ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದೆ. ದೇಶದಲ್ಲಿ ಬಿಜೆಪಿ (BJP) ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಜಾತ್ಯತೀತ ತತ್ವದ ಮೇಲೆ ಆಡಳಿತ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಿರ್ನಾಮ ಮಾಡುವ ಸಲುವಾಗಿ ಬಿಜೆಪಿ-ಜೆಡಿಎಸ್ ಜೊತೆ ಮೈತ್ರಿ: ಈಶ್ವರಪ್ಪ
Advertisement
Advertisement
ಯಾರು ಹೊಂದಾಣಿಕೆ ಮಾಡಿಕೊಂಡರೂ ನಮ್ಮ ಸಿದ್ಧಾಂತದ ಮೇಲೆ ನಾವು ಹೋರಾಟ ಮಾಡುತ್ತೇವೆ. ನಮ್ಮ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಹೋರಾಟ ಮಾಡುತ್ತೇವೆ. ಅವರು ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರ ಟಾರ್ಗೆಟ್ ಮಾಡಿದರೆ ಧಾರಾಳವಾಗಿ ಮಾಡಲಿ. ಯಾರು ಬೇಡ ಅಂತಾರೆ. ಬಿಜೆಪಿ ಅವರು ಮಾಡಲಿ, ಜೆಡಿಎಸ್ ಅವರು ಮಾಡಲಿ. ಎಲ್ಲವನ್ನೂ ಜನ ನೋಡುತ್ತಾರೆ. ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಜಿ20 ಔತಣಕೂಟಕ್ಕೆ ಆಹ್ವಾನ ಬಂದಿದೆ; ನಾನು ಹೋಗಲ್ಲ ಎಂದ ಸಿಎಂ
Advertisement
Advertisement
INDIA ಒಕ್ಕೂಟ ದೇಶದಲ್ಲಿ ಒಗ್ಗಟ್ಟಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಹಾಗಾಗಿ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಮಾಡ್ಕೊತ್ತಿದ್ದಾರೆ. ನಮಗೆ ಮತದಾರರ ಮೇಲೆ ವಿಶ್ವಾಸ ಇದೆ. ಕೆಲಸ ಮಾಡಿದವರನ್ನು ಮತದಾರರು ಗೆಲ್ಲಿಸುತ್ತಾರೆ. ಇಲ್ಲವಾದರೆ ಮನೆಗೆ ಕಳುಹಿಸುತ್ತಾರೆ. ಹಾಗಾಗಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ನಮಗೆ ಯಾವುದೇ ಎಫೆಕ್ಟ್ ಆಗಲ್ಲ ಎಂದರು. ಇದನ್ನೂ ಓದಿ: ಜೆಡಿಎಸ್ ಮೈತ್ರಿಯನ್ನು ನಾನು ಸ್ವಾಗತ ಮಾಡ್ತೀನಿ: ಮುನಿರತ್ನ
Web Stories