ಚಿಕ್ಕಬಳ್ಳಾಪುರ: ಈ ಬಾರಿ `ಲೋಕ’ಸಮರದಲ್ಲಿ (Lok Sabha Elections) ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಮೈತ್ರಿ ಪಕ್ಷವು ಜಂಟಿಯಾಗಿ ಕಸರತ್ತು ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪ್ರಧಾನಿ ಮೋದಿ-ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD DeveGowda) ದಂಡಯಾತ್ರೆ ಮುಂದುವರಿಯಲಿದೆ.
Advertisement
ಮೈಸೂರಿನಲ್ಲಿ ಅದ್ಧೂರಿ ಸಮಾವೇಶದ ಬಳಿಕ ಚಿಕ್ಕಬಳ್ಳಾಪುರ (Chikkaballapur) ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೈತ್ರಿ ಪಕ್ಷ ಪ್ರಚಾರ ನಡೆಸಲು ಪ್ಲ್ಯಾನ್ ಮಾಡಿದೆ. ಇದೇ ಏಪ್ರಿಲ್ 20 ರಂದು ಚಿಕ್ಕಬಳ್ಳಾಪುರದ ದೇವನಹಳ್ಳಿಯಲ್ಲಿ ಮತ್ತೊಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲೂ ಪ್ರಧಾನಿ ಮೋದಿ-ಹೆಚ್‌ಡಿಡಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
Advertisement
ಪ್ರಧಾನಿ ಮೋದಿ ಅಭಿವೃದ್ಧಿ ಮಂತ್ರ, ದೊಡ್ಡಗೌಡರ ಒಕ್ಕಲಿಗ ದಾಳವೇ ದೋಸ್ತಿಗೆ ಬಿಗ್ ಬೂಸ್ಟ್ ನೀಡಲಿದ್ದು, ರಾಜ್ಯದಲ್ಲಿ ಹೆಚ್ಚುಸ್ಥಾನಗಳಲ್ಲಿ ಜಯಭೇರಿ ಬಾರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಹಿಂದುತ್ವದ ಭದ್ರಕೋಟೆಯಲ್ಲಿ ಮೋದಿ ಕಮಾಲ್- ಫೋಟೋಗಳಲ್ಲಿ ನೋಡಿ
Advertisement
ಸದ್ಯ ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿಯವರ (PM Modi) ಅದ್ಧೂರಿ ಪ್ರವೇಶವಾಗಿದೆ. ಒಂದೇ ದಿನ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್ ಶೋ ನಡೆಸಿ ಅಬ್ಬರಿದ್ದಾರೆ. ಇದರೊಂದಿಗೆ ಮೋದಿ ಇದ್ದ ವೇದಿಕೆಯಲ್ಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಾಣಿಸಿಕೊಂಡಿದ್ದು, ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಸರ್ಕಾರದ ವಿರುದ್ಧ ಕಿಡಿ, ಮೋದಿ ಗುಣಗಾನ:
ಮೋದಿ ಇದ್ದ ವೇದಿಕೆಯಲ್ಲಿ ದೇವೇಗೌಡರು ಕೂಡ ಆರ್ಭಟಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಫೋನ್ ಟ್ಯಾಪಿಂಗ್, ಒಕ್ಕಲಿಗರ ಮಠ ಒಡೆದ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ರೋಷಾವೇಶದಿಂದ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದ ದೋಸ್ತಿ ಪಕ್ಷಗಳ ಸಮಾವೇಶದಲ್ಲಿ ಪ್ರಧಾನಿ ಮೋದಿಯನ್ನು ಕೊಂಡಾಡಿದ ಮಾಜಿ ಪ್ರಧಾನಿ ದೇವೇಗೌಡರು, ದೇಶಕ್ಕೆ ಕೀರ್ತಿ ತಂದು ಕೊಟ್ಟ ನಾಯಕ ಮೋದಿ. ಬುದ್ದಿಯಿದ್ದೇ ಮೋದಿ ಜೊತೆ ಹೋಗಲು ಕುಮಾರಸ್ವಾಮಿಗೆ ಹೇಳಿದ್ದೇನೆ. 64 ವರ್ಷದ ರಾಜಕೀಯ ಜೀವನದಲ್ಲಿ ಇಂಥ ರಾಜ್ಯ ಸರ್ಕಾರವನ್ನು ನೋಡಿಲ್ಲ. ಎಲ್ಲಾ ಕಡೆ ಬಾಚೋದೇ ಬಾಚೋದು. ರಾಜ್ಯ ಆಳ್ತಿರೋ ಮಹಾನುಭಾವರು, ಪುಣ್ಯಾತ್ಮರಿಗೆ ನಮೋ ನಮಃ. ಮೋದಿ ಬಗ್ಗೆ ಕೇವಲವಾಗಿ ಮಾತಾಡ್ತಾರೆ. ಯಡಿಯೂರಪ್ಪ ಎಲ್ಲಿಗೇ ಪ್ರಚಾರಕ್ಕೆ ಕರೆದೂ ನಾನು ಬರ್ತೇನೆ. ರಾಜ್ಯದಲ್ಲಿ ಕನಿಷ್ಠ 24 ಸೀಟ್ ಗೆಲ್ಲಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪನವ್ರೇ ನೀವು ಕರೆದಲ್ಲಿ ಬಂದು ಪ್ರಚಾರ ಮಾಡ್ತೀನಿ: ಹೆಚ್ಡಿಡಿ