ಬೆಂಗಳೂರು/ಮಂಡ್ಯ: ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು(Yediyurappa) ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಈಗ ಜಪ ಶುರುವಾಗಿದೆ. ಇವತ್ತು ಕೂಡ ಮಾಜಿ ಸಿಎಂ ಯಡಿಯೂರಪ್ಪಗೆ ಅಗ್ರ ತಂಬೂಲ ಸಿಕ್ಕಿದೆ.
ಸುಮಾರು 15-20 ದಿನಗಳ ಬಳಿಕ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ(BJP Jana Sankalpa Samavesh) ಬಿಎಸ್‍ವೈ ಪಾಲ್ಗೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಈ ಸಮಾವೇಶಕ್ಕೆ ಯಡಿಯೂರಪ್ಪರನ್ನು ಕರೆದೊಯ್ಯಲು ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಕಾವೇರಿ ನಿವಾಸಕ್ಕೆ ತೆರಳಿದ್ದರು. ಇದನ್ನೂ ಓದಿ: ಶಾರೀಕ್‌ಗಿಂತಲೂ ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್‌ಮೈಂಡ್ ಉಗ್ರ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ
Advertisement
Advertisement
ಕಾರಿನಲ್ಲಿ ಯಡಿಯೂರಪ್ಪ ಮುಂದೆ ಕುಳಿತರೆ ಸಿಎಂ ಬೊಮ್ಮಾಯಿ ಹಿಂದಿನ ಸೀಟಲ್ಲಿ ಕುಳಿತಿದ್ದರು. ಮಂಡ್ಯದ ಜನಸಂಕಲ್ಪ ಸಮಾವೇಶಗಳಲ್ಲಿಯೂ ಯಡಿಯೂರಪ್ಪ ಗುಣಗಾನ ನಡೆಯಿತು.
Advertisement
ಸಿಎಂ ಬೊಮ್ಮಾಯಿ ಮಾತನಾಡಿ, ರೈತರ ಬಗ್ಗೆ ಯಡಿಯೂರಪ್ಪ ಅವರಿಗೆ ಇರುವ ಕಾಳಜಿ ಬೇರೆ ಯಾವ ನಾಯಕರಿಗೂ ಇಲ್ಲ. ನಾವು ತುಷ್ಟೀಕರಣ ರಾಜಕಾರಣ ಮಾಡುವುದಿಲ್ಲ. ಎಲ್ಲಾ ವರ್ಗದ ಜನರ ಪರ ನಾವು ನಿಂತಿದ್ದೇವೆ ಎಂದು ಹೇಳಿದರು.
Advertisement
ಕಂದಾಯ ಸಚಿವ ಅಶೋಕ್ ಮಾತನಾಡಿ, ಯಡಿಯೂರಪ್ಪ- ಬೊಮ್ಮಾಯಿ ಅವರದು ತಂದೆ – ಮಗನ ಸಂಬಂಧ. ಯಡಿಯೂರಪ್ಪ ಗುಡುಗಿದರೆ ವಿಧಾನಸೌದ ನಡುಗುತ್ತದೆ. ಇಂತ ಯಡಿಯೂರಪ್ಪ ಅವರೇ ಬಿಜೆಪಿ 140 ಸ್ಥಾನ ಬರುತ್ತದೆ ಎಂದು ಹೇಳಿದ್ದಾರೆ. ಇದು ಸತ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.