ಬೆಂಗಳೂರು: ಬಿಜೆಪಿಗೆ ಯಾರಿಂದ ತೊಂದರೆಯಾಗುತ್ತಿದೆ, ಅಂತಹವರನ್ನು ನಿರ್ನಾಮ ಮಾಡುವ ಕೆಲಸ ನಡೆಯುತ್ತಿದೆ. ಒಂದೋ ಅವರೊಂದಿಗೆ ಹೋಗಬೇಕು ಇಲ್ಲವೇ ಅವರಿಗೆ ಶರಣಾಗಬೇಕು. ಚಾರ್ಜ್ ಶೀಟ್‌ನಿಂದ ಹೊಸದಾಗಿ ಏನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು ನ್ಯಾಯ, ನೀತಿ, ಸತ್ಯ, ಧರ್ಮ, ಕಾನೂನು ಎಲ್ಲದರಲ್ಲೂ ನನಗೆ ನಂಬಿಕೆ ಇದೆ. ನಾನು ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ನಾನು ಇದನ್ನು ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ
Advertisement
Advertisement
ಚಾರ್ಜ್ ಶೀಟ್ ಫೈಲ್ ಮಾಡಿರುವ ಬಗ್ಗೆ ನನಗೆ ಮಾಧ್ಯಮದಿಂದ ತಿಳಿಯಿತು. ನನಗೆ ಅದರ ಕಾಪಿ ಇನ್ನೂ ಸಿಕ್ಕಿಲ್ಲ. ಸಾಮಾನ್ಯವಾಗಿ 6 ತಿಂಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡುತ್ತಾರೆ. ನನ್ನ ಮೇಲೆ ಬಹಳ ದೊಡ್ಡ ತನಿಖೆ ನಡೆದಿದೆ. ಆದರೆ ಅವರು ಹೊಸದಾಗಿ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ನನಗೆ ಅದರ ಕಾಪಿ ಬರಲಿ. ಸತ್ಯ, ಧರ್ಮ, ಕಾನೂನು ಇರುವ ದೇಶದಲ್ಲಿ ಇದನ್ನೆಲ್ಲಾ ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ 9 ತಿಂಗಳಷ್ಟೇ ಆಯಸ್ಸು: ಸಿಎಂ ಇಬ್ರಾಹಿಂ
Advertisement
ನಾನೇನೂ ತಪ್ಪು ಮಾಡಿಲ್ಲ ಎನ್ನುವುದು ರಾಜ್ಯಕ್ಕೆ, ದೇಶಕ್ಕೆ ಗೊತ್ತಿದೆ. ಆದರೆ ಬಿಜೆಪಿಯವರು ನನ್ನ ಮೇಲೆ ರಾಜಕೀಯದ ಎಲ್ಲಾ ಅಸ್ತ್ರಗಳನ್ನೂ ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು.