DharwadDistrictsKarnatakaLatestMain Post

ಎಸ್‌ಡಿಪಿಐ ಮೂಲಕ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭ ಪಡೆಯುತ್ತಿದೆ: ಮುತಾಲಿಕ್

ಧಾರವಾಡ: ಕಳೆದ ಹಲವಾರು ವರ್ಷದಿಂದ ಎಸ್‌ಡಿಪಿಐ (SDPI) ಹಾಗೂ ಪಿಎಫ್‌ಐ (PFI) ಬ್ಯಾನ್ ಮಾಡಬೇಕು ಎಂದು ಆಗ್ರಹ ಮಾಡುತ್ತಿದ್ದೇವೆ. ಸಾಕಷ್ಟು ಗಲಭೆ ಹಾಗೂ ಕೊಲೆಗಳಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಎರಡೂ ಸಂಸ್ಥೆಗಳು ಭಾಗಿಯಾಗಿರುವ ಸಾಕ್ಷಿ ಸಿಕ್ಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದರು.

ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಗಲೂ ಇವರನ್ನು ಬ್ಯಾನ್ ಮಾಡಲು ಮೀನಾಮೇಷ ಎಣಿಸುತ್ತಿವೆ. ಈಗ ಪಿಎಫ್‌ಐ ಪ್ರಮುಖರ ಮೇಲೆ ದಾಳಿ ನಡೆದಿವೆ. 8 ಜಿಲ್ಲೆಯ ಕಚೇರಿ ಮೇಲೆ ದಾಳಿ ನಡೆದಿವೆ. ಕೆಲವು ದಾಖಲೆ ಹಣ ಸಿಕ್ಕಿದೆ ಎಂದು ಸುದ್ದಿಯಾಗಿದೆ. ಇವರದು ಹಿಜಬ್‌ನಲ್ಲಿಯೂ ಕೈವಾಡ ಇದೆ ಎಂದು ಹೇಳಿದರು.

ಪ್ರವೀಣ್ ನೆಟ್ಟಾರು ಹಾಗೂ ಹರ್ಷನ ಕೊಲೆಯಲ್ಲಿ ಇವರು ಭಾಗಿಯಾಗಿದ್ದಾರೆ. ಇವರ ಸಂಘಟನೆ ಉಲ್ಲೇಖ ಎಫ್‌ಐಆರ್‌ನಲ್ಲಿದೆ. ಇವರನ್ನು ಯಾಕೆ ಬ್ಯಾನ್ ಮಾಡಿಲ್ಲ? ಈ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.

ಬಿಹಾರದಲ್ಲಿ ಸಿಕ್ಕಿಕೊಂಡವರು ಮುಸ್ಲಿಂ ರಾಷ್ಟ್ರ ಮಾಡಲು ಹೊರಟವರು. ಶಾಹಿನ್ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಟಿಗಟ್ಟಲೆ ಹಣ ಕೊಟ್ಟವರು ಇವರೇ! ಸಮಾಜ ಕಂಟಕ ನಡೆಸಿದವರ ಬ್ಯಾನ್ ಯಾಕೆ ಮಾಡ್ತಿಲ್ಲ? ನಾವು ಮುಂದಿನ ತಿಂಗಳು ಇವರ ಬಗ್ಗೆ ದಾಖಲೆ ಸಹಿತ ಬಹಿರಂಗ ಗೊಳಿಸಿ ಆಂದೋಲನ ಮಾಡುತ್ತೇವೆ. ಪಿಎಫ್‌ಐ, ಎಸ್‌ಡಿಪಿಐ ದೇಶದ್ರೋಹ ಚಟುವಟಿಕೆಗಳನ್ನು ಮಾಡಿದ್ದು ನಿಶ್ಚಿತ ಎಂದರು.

ಇವರು ಹುಬ್ಬಳ್ಳಿಯಲ್ಲಿ ರಾಜ್ಯಾಧ್ಯಕ್ಷರ ಜೊತೆ ಸಭೆ ಮಾಡಿದ್ದಾರೆ. ಎಲ್ಲಾ ಕಡೆ ಚಟುವಟಿಕೆ ನಡೆದಿವೆ. ಅವರಿಗೆ ಯಾವುದೇ ಭಯ ಇಲ್ಲ, ಸೊಕ್ಕಿನವರು, ಇವತ್ತು ಜೈಲಿಗೆ ಹೋಗ್ತಾರೆ. ನಾಳೆ ಮತ್ತೆ ಬೇಲ್ ಸಿಗುತ್ತೆ. ಇವರು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದಾರೆ. ಇವರಿಗೆ ಸಂವಿಧಾನ ಬದ್ಧತೆ ಇಲ್ಲ. ಷರಿಯಾ ಆಧಾರದ ಮೇಲೆ ಇವರು ಹೊರಟವರು. ಇವರಿಗೆ ಮಟ್ಟ ಹಾಕಬೇಕು. ಈಗ ನಮ್ಮ ಆಂದೋಲನ ಆರಂಭ ಮಾಡ್ತೆವೆ ಎಂದರು. ಇದನ್ನೂ ಓದಿ: NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ

ಪ್ಯಾರಾ ಮಿಲಿಟರಿ ತರಹ ಇವರದು ಸಮಾಂತರ ಪಡೆ ತಯಾರು ಮಾಡುತ್ತಿದ್ದಾರೆ. ಕೇರಳ ಮೂಲಕ ಆರಂಭವಾದ ಈ ದೇಶ ದ್ರೋಹ ಕ್ಯಾನ್ಸರ್ ಇಡಿ ದೇಶದಲ್ಲಿ ಹರಡಿದೆ. 23 ರಾಜ್ಯಗಳಲ್ಲಿ 2 ಸಂಘಟನೆ ಕೆಲಸ ಮಾಡುತ್ತಿವೆ. ಸಿಎಎ ಯಿಂದ ಹಿಡಿದು ಅಜಾನ್ ವರೆಗೆ ಇವರು ಪ್ರಚೋದನೆ ಕೊಟ್ಟಿದ್ದಾರೆ. ಎಲ್ಲರೂ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಮುಸ್ಲಿಂ ಲೀಗ್ ಹಾಗೂ ಮುಸ್ಲಿಂ ಸಮಾಜದವರು ಬ್ಯಾನ್ ಮಾಡಿ ಎಂದಿದ್ದಾರೆ ಎಂದು ತಿಳಿಸಿದರು.

ಕೇರಳ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಬ್ಯಾನ್ ಮಾಡಲು ಹೇಳಿದೆ, ಸರ್ಕಾರದಲ್ಲಿ ಇಲ್ಲದ ಸಮಯದಲ್ಲಿ ಬಿಜೆಪಿ ಕೂಡಾ ಬ್ಯಾನ್ ಮಾಡಲು ಹೇಳಿತ್ತು. ಈಗ ನಿಮ್ಮ ಸರ್ಕಾರ ಇರುವ ಸಮಯದಲ್ಲಿ ಬ್ಯಾನ್ ಮಾಡದೇ ರೇಡ್ ಮಾಡುವುದು, ಸೀಜ್ ಮಾಡುವುದು ನಡೆದಿದೆ. ಇದು ಸಂಶಯ ತರುವಂತೆ ಮಾಡಿದೆ ಎಂದು ಕಿಡಿಕಾರಿದರು.

ಸರ್ಕಾರ ಇವರನ್ನು ಬ್ಯಾನ್ ಮಾಡಲು ಮೀನಾಮೇಷ ಎಣಿಸುತ್ತಿದೆ. ಯಾಕೆ ತಡ ಮಾಡುತ್ತಿದೆ ಎನ್ನುವುದು ಯಕ್ಷ ಪ್ರಶ್ನೆ. ಎಸ್‌ಡಿಪಿಐ ಮೂಲಕ ಕಾಂಗ್ರೆಸ್ ಒಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭಕ್ಕಾಗಿ ಸಾಕುತ್ತಿದೆ. ಇದು ಬಹಿರಂಗ ಸತ್ಯ. ಎಲ್ಲರೂ ಇದನ್ನೇ ಮಾತನಾಡುತ್ತಿದ್ದಾರೆ. ಬಿಜೆಪಿಯ ಬಿ ಟೀಮ್ ಇದು ಎಂದು ಹೇಳಿದ್ರೂ ಬಿಜೆಪಿಗೆ ಅರ್ಥ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಪರೆಡ್ಡಿ ಪಾಳ್ಯದಲ್ಲಿ 5 ಅಂತಸ್ತಿನ ಮನೆ ಉಡೀಸ್

ನೂರಕ್ಕೆ ನೂರು ಇದರ ಲಾಭ ಬಿಜೆಪಿಗೆ ಸಿಕ್ಕಿದೆ, ಎಸ್‌ಡಿಪಿಐ ಎಲ್ಲೆಲ್ಲಿ ಸ್ಪರ್ಧೆ ಮಾಡಿದೆ, ಅದರ ಲಾಭ ಬಿಜೆಪಿಗೆ ಆಗಿದೆ. ಎಸ್‌ಡಿಪಿಐ ಕೂಡಾ ಸಾಕಷ್ಟು ಕಡೆ ಗೆದ್ದಿದೆ. ಬಿಜೆಪಿಯ ಲಾಭಕ್ಕೆ ಸಮಾಜವನ್ನು ಬಲಿ ಕೊಡಬೇಡಿ, ಹಿಂದೂಗಳಿಗೆ ಬಲಿ ಕೊಡಬೇಡಿ, ಇವರನ್ನು ಪೋಷಿಸಬೇಡಿ ಎಂದು ಮನವಿ ಮಾಡಿದರು.

Live Tv

Leave a Reply

Your email address will not be published.

Back to top button