ಕೊಪ್ಪಳ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದ ಹಿನ್ನಲೆ ಕೊಪ್ಪಳದಿಂದ ಮೊಳಕಾಲ್ಮುರು ಶಾಸಕ ಶ್ರೀರಾಮುಲುರನ್ನ ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋಮವಾರ ತಡರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ವರಿಷ್ಠರು ತೀರ್ಮಾನ ಕೈಗೊಂಡಿರುವ ಮಾಹಿತಿ ಪ್ರಕಾರ, ಕೊಪ್ಪಳದಿಂದ ಶ್ರೀರಾಮುಲು ಅವರು ಸ್ಪರ್ಧಿಸಿದರೆ ಕೊಪ್ಪಳ, ಬಳ್ಳಾರಿ, ರಾಯಚೂರು, ಹಾವೇರಿ-ಗದಗ, ಬಾಗಲಕೋಟೆ ಕ್ಷೇತ್ರಗಳಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಆದರಿಂದ ಶ್ರೀರಾಮುಲುಗೆ ಕೊಪ್ಪಳದಿಂದ ಕಣಕ್ಕೆ ಇಳಿಯಲು ಬಿಜೆಪಿ ವರಷ್ಠರು ಒತ್ತಾಯ ಮಾಡುತ್ತಿದ್ದಾರಂತೆ. ಈಗಾಗಲೇ ಕೊಪ್ಪಳ ಲೋಕಸಭೆ ಟಿಕೆಟ್‍ಗಾಗಿ ಹಾಲಿ ಸಂಸದ ಕರಡಿ ಸಂಗಣ್ಣರಿಂದ ತೀವ್ರ ಕಸರತ್ತು ನಡೆಯುತ್ತಿದೆ.
Advertisement
Advertisement
ಕರಡಿ ಸಂಗಣ್ಣ ಸೇರಿದಂತೆ ಸಿ.ವಿ ಚಂದ್ರಶೇಖರ್, ಡಾ.ಕೆ ಬಸವರಾಜ ಟಿಕೆಟ್‍ಗಾಗಿ ತೀವ್ರ ಲಾಬಿ ನೆಡಸಿದ್ದಾರೆ. ಈ ಕಡೆ ಸ್ಪರ್ಧೆ ಮಾಡುವಂತೆ ವರಿಷ್ಠರಿಂದ ತೀವ್ರ ಒತ್ತಡ ಎದರುಸುತ್ತಿರುವ ಶ್ರೀರಾಮುಲು ಅವರು ಲೋಕಸಭೆ ಸ್ಪರ್ಧೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನುವ ಮಾಹಿತಿ ದೊರಕಿದೆ.
Advertisement
Advertisement
2014ರ ಚುನಾವಣೆಯಲ್ಲಿ ಶ್ರೀರಾಮುಲು ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ 85,144 ಮತಗಳ ಅಂತರದಿಂದ ಜಯಗಳಿಸಿದ್ದರು. ಶ್ರೀರಾಮುಲು 5,34,406 ಮತಗಳನ್ನು ಪಡೆದರೆ ಹನುಮಂತಪ್ಪ 4,49,262 ಮತಗಳನ್ನು ಪಡೆದಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೊಳಕಾಲ್ಮೂರು ಮತ್ತು ಬದಾಮಿಯಿಂದ ಸ್ಪರ್ಧಿಸಿದ್ದರು. ಮೊಳಕಾಲ್ಮುರು ಕ್ಷೇತ್ರದಲ್ಲಿ ಗೆದ್ದಿದ್ದರೆ ಬದಾಮಿಯಲ್ಲಿ ಸಿದ್ದರಾಮಯ್ಯ ಮುಂದೆ ಸೋತಿದ್ದರು. ವಿಧಾನಸಭೆಗೆ ಆಯ್ಕೆಯಾದ ಬಳಿಕ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.