ಕೋಲ್ಕತ್ತಾ: ಬಿಜೆಪಿಯು (BJP) ಪಶ್ಚಿಮ ಬಂಗಾಳದಲ್ಲಿ (West Bengal) ಮಣಿಪುರದಂತಹ ಪರಿಸ್ಥಿತಿಯನ್ನು ತರಲು ಪ್ರಯತ್ನಿಸುತ್ತಿದ್ದು, ಜನಾಂಗೀಯ ಗಲಭೆಗಳನ್ನು ಸೃಷ್ಟಿಸಲು ಯೋಚಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದಾರೆ.
ಪಶ್ಚಿಮ ಮೇದಿನೀಪುರ ಜಿಲ್ಲೆಯ ಸಲ್ಬೋನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸಚಿವ ಬಿರ್ಬಹಾ ಹನ್ಸ್ಡಾ(Birbaha Hansda) ಅವರ ವಾಹನದ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೇ ಈ ಘಟನೆಯ ಹಿಂದೆ ಇರುವುದು ಬಿಜೆಪಿ ಕಾರ್ಯಕರ್ತರೇ ಹೊರತು ಕುರ್ಮಿ ಸಮುದಾಯದ (Kurmi Community) ಸದಸ್ಯರಲ್ಲ ಎಂದರು. ಇದನ್ನೂ ಓದಿ: ಕೇಜ್ರಿವಾಲ್, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು
Advertisement
Advertisement
ಮಣಿಪುರದಲ್ಲಿ (Manipur) ನಡೆದ ಹಿಂಸಾಚಾರ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ. ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಕ್ಷವು ಸಮುದಾಯಗಳ ನಡುವೆ ಇದೇ ರೀತಿಯ ಗಲಭೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆದಿವಾಸಿಗಳೊಂದಿಗೆ ಕುರ್ಮಿ ಸಮುದಾಯದ ಜನರು ಗಲಾಟೆ ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಬಿಜೆಪಿಯವರು ಬಯಸುತ್ತಾರೆ. ರಾಜ್ಯದಲ್ಲಿ ಜನಾಂಗೀಯ ಗಲಭೆಗಳಿಗೆ ಉತ್ತೇಜನ ನೀಡಲು ಯತ್ನಿಸಿದವರನ್ನು ಬಿಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು
Advertisement
Advertisement
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಟಿಎಂಸಿ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ರಾಜ್ಯ ಸಚಿವರ ವಾಹನದ ಮೇಲೆ ಶುಕ್ರವಾರ ಕಲ್ಲು ತೂರಾಟ ನಡೆದಿದೆ. ನಾನು ಈ ಹಿಂಸಾಚಾರವನ್ನು ಖಂಡಿಸುತ್ತೇನೆ. ಕುರ್ಮಿಗಳು ಈ ಘಟನೆಯ ಹಿಂದೆ ಇದ್ದಾರೆ ಎಂದರೆ ನಾನು ನಂಬುವುದಿಲ್ಲ. ಕುರ್ಮಿ ಸಮುದಾಯದ ಸದಸ್ಯರಂತೆ ವೇಷಧರಿಸಿ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ