DistrictsKarnatakaLatestLeading NewsMain PostMysuru

ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿಯಿಂದಲೇ ಫಂಡಿಂಗ್: ಸಿದ್ದರಾಮಯ್ಯ

ಮೈಸೂರು: ಗುಜರಾತ್‌ನಲ್ಲಿ (Gujarat) ಆಮ್ ಆದ್ಮಿ ಪಕ್ಷಕ್ಕೆ (AAP) ಬಿಜೆಪಿ (BJP) ಹಣ ನೀಡಿದೆ. ಕಾಂಗ್ರೆಸ್‌ನ (Congress) ಓಟ್ ಅನ್ನು ವಿಭಜನೆ ಮಾಡುವ ಸಲುವಾಗಿ ಬಿಜೆಪಿ ಆಪ್‌ಗೆ ಹಣ ನೀಡಿದೆ. ಇದರಿಂದ ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು, ಕಾಂಗ್ರೆಸ್‌ಗೆ ಹಿನ್ನಡೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಬಗ್ಗೆ ನಮಗೆ ಮೊದಲೇ ನಿರೀಕ್ಷೆಯಿತ್ತು. ಏಕೆಂದರೆ ಆಪ್ ನಮ್ಮ ವೋಟ್‌ಗಳನ್ನು ತಿನ್ನುತ್ತಿದೆ. ಆಪ್ ಪಡೆದಿರುವ ಮತಗಳೆಲ್ಲವೂ ಕಾಂಗ್ರೆಸ್‌ಗೆ ಸೇರಿದ್ದು. ಆದರೆ ಹಿಮಾಚಲ ಪ್ರದೇಶದಲ್ಲಿ (Himachal Pradesh) ಹಾಗಾಗುತ್ತಿಲ್ಲ. ಅಲ್ಲಿ ನಾವೇ ಮುಂದಿದ್ದೇವೆ ಎಂದು ಹೇಳಿದರು.

ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿಯಿಂದಲೇ ಫಂಡಿಂಗ್: ಸಿದ್ದರಾಮಯ್ಯ

ಗುಜರಾತ್‌ನಲ್ಲಿ ಆಪ್ ಮಾಡಿರುವ ತಂತ್ರಗಾರಿಕೆ ಕರ್ನಾಟಕದಲ್ಲಿ ಮಾಡಲು ಸಾಧ್ಯವಿಲ್ಲ. ಆಪ್ ಪಕ್ಷ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲ. ಇಲ್ಲಿ ಬಿಜೆಪಿ ಜೆಡಿಎಸ್ ಜೊತೆ ಸೇರಿ ಇಂತಹ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯುವುದಿಲ್ಲ. ಗುಜರಾತ್‌ನಲ್ಲಿ ಆಪ್ ತುಂಬಾ ಖರ್ಚು ಮಾಡಿ ಚುನಾವಣೆ ಮಾಡಿದೆ. ಆದರೂ ಅದಕ್ಕೆ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು ನೀಡಿದರು. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿಯಿಂದಲೇ ಫಂಡಿಂಗ್: ಸಿದ್ದರಾಮಯ್ಯ

ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಕರ್ನಾಟಕದ ಮೇಲೂ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯಕ್ಕೆ ಪ್ರಭಾವ ಬೀಳಲು ಸಾಧ್ಯವಿಲ್ಲ. ಆಯಾಯ ರಾಜ್ಯಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತವೆ. ಇಲ್ಲಿ ಬಿಜೆಪಿ ಭ್ರಷ್ಟ ಸರ್ಕಾರ ನಡೆಸುತ್ತಿದ್ದರೆ, ಕಾಂಗ್ರೆಸ್ ತುಂಬಾ ಗಟ್ಟಿಯಾಗಿ ನಿಂತಿದೆ. ನಾವು ಕರ್ನಾಟಕದಲ್ಲಿ ಸುಮ್ಮನೆ ಇದ್ದರೂ ಗೆಲ್ಲುವ ತಾಕತ್ತು ನಮ್ಮಲ್ಲಿದೆ. ನಮಗೆ ಯಾವುದೇ ತಂತ್ರಗಾರಿಕೆ ಮಾಡುವ ಅಗತ್ಯವೇ ಇಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹಿಮಾಚಲದಲ್ಲಿ ಹಾವು, ಏಣಿ ಆಟ – ಪಕ್ಷೇತರರೇ ನಿರ್ಣಾಯಕ?

Live Tv

Leave a Reply

Your email address will not be published. Required fields are marked *

Back to top button