ಬಿಜೆಪಿಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ ಅಭಿಯಾನ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

Public TV
2 Min Read
priyank kharge

ಬೆಂಗಳೂರು: ಬಿಜೆಪಿಯವರು (BJP) ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ (Waqf) ಅಭಿಯಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ಫ್ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಹೋರಾಟ ಮಾಡಲಿ ಯಾರು ಬೇಡ ಅಂದಿದ್ದಾರೆ. ವಿಪಕ್ಷದಲ್ಲಿ ಇದ್ದು ಇನ್ನೇನು ಕೆಲಸ ಇದೆ. ಜನರ ಸಮಸ್ಯೆ ಬಗೆಹರಿಸಲು ಅವರಿಂದ ಆಗಲಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್

ನನ್ನ ಪ್ರಶ್ನೆಗೆ ಮೊದಲು ಬಿಜೆಪಿ ಅವರು ಉತ್ತರ ಕೊಡಲಿ. ಕೇಂದ್ರ ಸರ್ಕಾರ ವಕ್ಫ್ ಆಸ್ತಿಗೆ ಜಿಯೋ ಮ್ಯಾಪಿಂಗ್‌ಗೆ ಹಣ ಕೊಟ್ಟಿರೋದು ಸುಳ್ಳಾ? ವಕ್ಫ್ ಆಸ್ತಿ ಉಳಿಸುತ್ತೇವೆ ಅಂತ ಹೇಳಿರೋರು ಸುಳ್ಳಾ? ಬಿಜೆಪಿ ಅವರು ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಉಳಿಸುತ್ತೇವೆ ಅಂತ ಹೇಳಿರೋದು ಸುಳ್ಳಾ? ಮೊದಲು ಅವರು ಪ್ರಶ್ನೆಗೆ ಉತ್ತರ ಕೊಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಸೆರೆ

ಬಿಜೆಪಿ ಅವಧಿಯಲ್ಲಿ ಅವರು ವಕ್ಫ್ ಬೋರ್ಡ್ ಮುಚ್ಚಿದ್ರಾ? ಅವರು ಎಷ್ಟು ದೇವಾಲಯ ರಕ್ಷಣೆ ಮಾಡಿದ್ದಾರೆ ಹೇಳಲಿ. ನಾನು ಬೇಕಾದರೆ ಅಂಕಿ ಅಂಶಗಳನ್ನು ಕೊಡುತ್ತೇನೆ. ಬಿಜೆಪಿ ಅವರಿಗೆ ನಾವು ಕೇಳೋ ಪ್ರಶ್ನೆಗೆ ಬಿಟ್ಟು ಉಳಿದದಕ್ಕೆ ಉತ್ತರ ಕೊಡುತ್ತಾರೆ. ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಲಿ. ಶೋಭಾ ಕರಂದ್ಲಾಜೆ ಪ್ರಶ್ನೆಗೆ ಕೇಂದ್ರ ಸರ್ಕಾರ ಕೊಟ್ಟಿರೋ ಉತ್ತರದ ಬಗ್ಗೆ ಕೇಳುತ್ತಿರುವುದು ನಾವು. ಸುಳ್ಳು ಸುದ್ದಿ ಹಬ್ಬಿಸೋದು, ಸಮಾಜದಲ್ಲಿ ವಿಷಬೀಜ ಬಿತ್ತೋದು ಇದೇ ಕೆಲಸ ಆಗಿದೆ ಇವರಿಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ʼ40% ಕಮಿಷನ್ ಆರೋಪ ಸುಳ್ಳುʼ – ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಸಿಎಂ

ಸಂಸದ ತೇಜಸ್ವಿಸೂರ್ಯ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದರು. ಯಾಕೆಂದರೆ ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಅದಕ್ಕೆ ಡಿಲೀಟ್ ಮಾಡಿದ್ದು. ಬಿಜೆಪಿ ಅವರು ಅಸ್ತಿತ್ವ ಉಳಿಸಿಕೊಳ್ಳೋಕೆ ಇದನ್ನ ಮಾಡುತ್ತಿರುವುದು. ನಾವು ಬಂದ ಮೇಲೆ ಯಾವುದು ಬದಲಾವಣೆ ಇಲ್ಲ. ಇವರ ಕಾಲದಲ್ಲಿ ಇದ್ದ ಕಾನೂನೇ ಇರೋದು ಈಗಲೂ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಅಭಿಯಾನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ವಕ್ಫ್ ಪ್ರಕರಣದಲ್ಲಿ ಶಾಂತಿ ಕದಡಲು ಬಿಡಲ್ಲ: ಪರಮೇಶ್ವರ್ ಎಚ್ಚರಿಕೆ

ಇವರು ಒಟ್ಟಾಗಿ ಮಾಡುತ್ತಿಲ್ಲ. ಈ ಅಭಿಯಾನದಲ್ಲಿ ಬಿಜೆಪಿಯದ್ದು ಎರಡು ಬಣ ಆಗಿದೆ. ಯತ್ನಾಳ್, ಜಾರಕಿಹೊಳಿ ಬಣ. ನಮ್ಮದು ನಿಜವಾದ ಬಿಜೆಪಿ ಎನ್ನುತ್ತಾರೆ. ವಿಜಯೇಂದ್ರ ಇನ್ನೊಂದು ಮಾಡಿದ್ದಾರೆ ಅದು ನಿಜವಾದ ಬಿಜೆಪಿ ಅಂತೆ. ಬಿಜೆಪಿ ತಂಡಗಳಿಗೆ ಅಪ್ಪ-ಅಮ್ಮ ಇಲ್ಲ ಅಂತ ನಾವು ಹೇಳುತ್ತಿಲ್ಲ. ಅವರೇ ಹೇಳುತ್ತಿದ್ದಾರೆ. ಬಿಜೆಪಿ ತಬ್ಬಲಿ ಆಗಿದೆ ಅಂತ ಅವರೇ ಹೇಳುತ್ತಿರುವುದು. ಯೋಜನೆಗಳು ತಬ್ಬಲಿ ಆಗಿದೆ ಅಂತ ಹೇಳುತ್ತಿದ್ದರು. ಅವರ ಮೇಲೆ ಕ್ರಮ ಆಗುತ್ತಿಲ್ಲ. ಇವರ ರೋಷ ಬರೀ ಸಿದ್ದರಾಮಯ್ಯ, ಡಿಕೆಶಿ, ನಮ್ಮ ಮೇಲೆ ಮಾತ್ರ. ಹಾದಿ-ಬೀದಿಯಲ್ಲಿ ನೀನು ಭ್ರಷ್ಟ, ನಿಮ್ಮಪ್ಪ ಭ್ರಷ್ಟ ಅಂತ ಓಡಾಡುತ್ತಿದ್ದಾರೆ. ವೇದಿಕೆ ಹತ್ತಿದರೆ ಮುಜುಗರ ಆಗುತ್ತೆ ಎಂದು ಹೇಳುತ್ತಿದ್ದಾರೆ. ಈ ಪಕ್ಷಕ್ಕೆ ಅಪ್ಪ, ಅಮ್ಮ ಇಲ್ಲ. ದುಬೈಗೆ ಯಾಕೆ ಹೋಗುತ್ತಾರೆ? ಮೊರಿಶಿಯಸ್ ಯಾಕೆ ಹೋಗ್ತಾರೆ? ಮನಿ ಲಾಂಡರಿಂಗ್ ಆಕ್ಟ್‌ನಲ್ಲಿ ಯಾಕೆ ನಿಮ್ಮ ಹೆಸರಿದೆ ಎಂದು ಮಾತನಾಡುತ್ತಿದ್ದಾರೆ. ಮೊದಲು ಅದನ್ನ ನಿಯಂತ್ರಣ ಮಾಡಲಿ. ಆಮೇಲೆ ಕಾಂಗ್ರೆಸ್ ಬಗ್ಗೆ ಮಾತಾಡಲಿ ಎಂದು ಗುಡುಗಿದರು. ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ಮಾತಾಡಿದ್ದು ಸರಿಯಲ್ಲ- ಪ್ರಿಯಾಂಕ್ ಖರ್ಗೆ

Share This Article