ಬೆಂಗಳೂರು: ನನ್ನ ವಿರುದ್ಧ ಪ್ರತಿಭಟನೆ ಮಾಡಿದ ಬಿಜೆಪಿಗೆ ಮುಖಭಂಗವಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ (Priyank Kharge) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ರಾಜ್ಯಾಧ್ಯಕ್ಷ ಅನುಪಸ್ಥಿತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ ಎಂದರೆ ಪ್ರಕರಣವನ್ನ ಎಷ್ಟು ಗಂಭೀರವಾಗಿ ತಗೆದುಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಅವರು ಹೋರಾಟ ಮಾಡಿದಷ್ಟು, ಕೆದಕಿದಷ್ಟು ಅವರಿಗೆ ಮುಖಭಂಗ ಆಗುತ್ತದೆ ಎಂದು ನಾನು ಮೊದಲೆ ಹೇಳಿದ್ದೆ. ಹಾಗೆಯೇ ಆಗಿದೆ ಎಂದರು.ಇದನ್ನೂ ಓದಿ:ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ
Advertisement
Advertisement
ವಿರೋಧ ಪಕ್ಷವಾಗಿ 2000 ಜನರನ್ನು ಸೇರಿಸಲು ಇವರಿಗೆ ಆಗಿಲ್ಲ. ಬಿಜೆಪಿ ಮನೆ ಒಂದು ನೂರು ಬಾಗಿಲು ಆಗಿದೆ. ಕೆಲವರು ವಕ್ಫ್ ಅಂತಾರೆ, ಕೆಲವರು ಕೆಎಸ್‌ಆರ್‌ಟಿಸಿಯಲ್ಲಿ ಹೂ ಕೊಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಕಡೆ ಓಡಾಡ್ತಿದಾರೆ. ನಮ್ಮದು ಬುದ್ಧ ಬಸವ ತತ್ವ, ಅವರದು ಮನುಸ್ಮೃತಿ. ಅದಕ್ಕೆ ಅವರಿಗೆ ನನ್ನ ಕಂಡರೆ ಆಗಲ್ಲ. ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಮಾತನಾಡಿದ್ದರು, ವಿವಾದ ಡೈವರ್ಟ್ ಮಾಡೋಕೆ ಈಗ ಬೇರೆ ಆರೋಪ ಮಾಡ್ತಿದಾರೆ. ಅವರನ್ನ ಮೆಚ್ಚಿಸೋಕೆ ಇಲ್ಲಿ ಪ್ರತಿಭಟನೆ ಮಾಡ್ತಿದಾರೆ ಎಂದಿದ್ದಾರೆ.
Advertisement
ಇದೇ ವೇಳೆ ಕುಮಾರಸ್ವಾಮಿ ಅವರ 60% ಆರೋಪ ವಿಚಾರವಾಗಿ, ಅದಕ್ಕೂ ಅವರ ಬಳಿ ಒಂದು ಪೆನ್‌ಡ್ರೈವ್ ಇರಬೇಕು. ರೆಸ್ಪಾನ್ಸಿಬಲ್ ಪರ್ಸನ್ ಅವರು ಏನಾದರು ಆಧಾರ ಇರಬೇಕಲ್ಲ. ಇತಿಮಿತಿಯಲ್ಲಿ ಇರಬೇಕು ಅಂತಾರೆ. ಹಾಗಾದರೆ ಅವರು ಲಿಮಿಟ್‌ನಲ್ಲಿ ಮಾಡಿದ್ರು ಅಂತ ಅರ್ಥನಾ? ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಕೇಂದ್ರ ಸಚಿವರಾಗಿ ಹೀಗೆ ಬೀದಿಯಲ್ಲಿ ಹೋಗೋ ತರ ಮಾತನಾಡಿದರೆ ಏನು ಉತ್ತರ ಕೊಡೋಕೆ ಆಗುತ್ತದೆ. 60 ಪರ್ಸೆಂಟ್ 70 ಪರ್ಸೆಂಟ್ ಅಂದರೆ. ನಾವು 40% ಆರೋಪ ಮಾಡಿದಾಗ ರಾಜ್ಯಪಾಲರಿಗೆ ಲೋಕಾಯಯಕ್ತರಿಗೆ ಏನು ಕಂಪ್ಲೀಟ್ ಕೊಟ್ಟಿದ್ದರು? ಬಿಜೆಪಿ ಶಾಸಕರು ಏನು ಮಾತನಾಡಿದ್ದರು? ಮಾಧ್ಯಮದಲ್ಲಿ ಏನು ಬಂದಿತ್ತು? ಇಲ್ಲಿ ಏನು ಆಧಾರ ಇದೆ? ಪೆನ್‌ಡ್ರೈವ್ ಇದೆಯಾ? ಪೆನ್‌ಡ್ರೈವ್ ಹೊರಗೆ ಬಂತು. ಆದರೆ ಯಾವ ಪೆನ್‌ಡ್ರೈವ್ ಅಂತ ಎಲ್ಲರಿಗೂ ಗೊತ್ತು. ಪ್ರಚಾರಕ್ಕೆ ಪ್ರೈಮ್‌ಟೈಮ್ ನ್ಯೂಸಲ್ಲಿ ಬರೋಕೆ ಮಾತನಾಡೋದು ಅಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ