ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ – ಪ್ರಮೋದ್ ಮುತಾಲಿಕ್ ಕಿಡಿ

Public TV
2 Min Read
Pramod Muthalik

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ (BJP) ನೇರ ಹೊಣೆ ಎಂದು ಶ್ರೀರಾಮಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ (Pramod Muthali) ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ (Shivamogga) ತಡರಾತ್ರಿ ಹಿಂಸಾಚಾರ ವಿಚಾರ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ. ಶಿವಮೊಗದಲ್ಲಿ ಜಿಲ್ಲೆಯವರೇ ಗೃಹಸಚಿವರಾಗಿದ್ದರು. ಆದರೂ ಯಾಕೆ ಇದೆಲ್ಲಾ ಕಂಟ್ರೋಲ್ ಮಾಡಲಿಲ್ಲ? ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ. ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಾಗುತ್ತೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

BJP Congress

ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಪ್ರಮೋದ್ ಮುತಾಲಿಕ್ ದೂರು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ (Government Of Karnataka) ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡೋದಕ್ಕೆ ನಮ್ಮ ವಿರೋಧವಿದೆ. ಮತಾಂತರ ಕಾಯ್ದೆಗೆ ತಿದ್ದುಪಡಿ ತರೋದಕ್ಕೂ ನಮ್ಮ ವಿರೋಧವಿದೆ. ಸ್ವಾತಂತ್ರ‍್ಯ ಹೋರಾಟಗಾರರ ಪಠ್ಯವನ್ನ ಪುಸ್ತಕದಿಂದ ತೆಗೆದಿರೋದು ಸರಿಯಲ್ಲ ಎಂಬ ಅಂಶಗಳನ್ನ ಉಲ್ಲೇಖಿಸಿ ದೂರು ಸಲ್ಲಿಸಿದ್ದು, ರಾಜ್ಯಪಾಲರ ಪರವಾಗಿ ರಾಜಭವನದ ಅಧಿಕಾರಿಗಳು ಮನವಿ ಸ್ವೀಕರಿಸಿದ್ದಾರೆ.

TEXTBOOK

ಮನವಿ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, 1984ರಲ್ಲಿಯೇ ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಬಿಜೆಪಿ ಅದನ್ನ ಕೆಲ ಬದಲಾವಣೆ ಮಾಡಿತ್ತು ಅಷ್ಟೇ. ನೀವೇ ಕಾಯ್ದೆ ಮಾಡಿ, ಈಗ ವಿರೋಧ ಮಾಡ್ತಿರೋದು ಸರಿನಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಹೋಯ್ತು – ಇನ್ಮುಂದೆ ಮನೆ ಬೆಳಗೋದು ಗೃಹಜ್ಯೋತಿ ಮಾತ್ರ

ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ, ಸೋನಿಯಾ ಗಾಂಧಿ (Sonia Gandhi) ಅವರನ್ನ ಓಲೈಸೋದಕ್ಕೆ ಈ ರೀತಿ ಮಾಡಲಾಗುತ್ತಿದೆ. ಮೊದಲಿನಿಂದಲೂ ಮುಸ್ಲಿಂ (Muslims) ಓಲೈಕೆ ಮಾಡೋದು ಕಾಂಗ್ರೆಸ್‌ನ ಕಾಯಕವಾಗಿದೆ. ಬಿಜೆಪಿ ಮಾಡಿದ ತಪ್ಪಿಗೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಷ್ಟೇ. ಪಠ್ಯದಲ್ಲಿ ಸ್ವಾಂತತ್ರ್ಯ ಹೋರಾಟಗಾರರ ಪಠ್ಯ ತೆಗೆದಿರೋದು ಸರಿಯಲ್ಲ. ದೇಶದ್ರೋಹಿಗಳ, ದೇಶದ ಮೇಲೆ ದಾಳಿ ಮಾಡಿದವರ ಪಠ್ಯವನ್ನ ಮಕ್ಕಳು ಓದಬೇಕಾ..? ಸಾರ್ವರ್ಕರ್ ಒಬ್ಬ ದೇಶ ಪ್ರೇಮಿ, ಕ್ರಾಂತಿಕಾರಿ ಕಾಂಗ್ರೆಸ್‌ಗೆ ಚರಕ ತಿರುಗಿಸೋ ಗಾಂಧೀಜಿ ಬೇಕೆ ಹೊರತು ಕ್ರಾಂತಿಕಾರಿಗಳು ಬೇಡ ಎಂದು ತಿರುಗೇಟು ನೀಡಿದ್ದಾರೆ.

ಪಠ್ಯ ಸೇರಿಸೋಕೆ ಪಿಹೆಚ್‌ಡಿನೇ ಮಾಡಬೇಕು ಅಂತೇನಿಲ್ಲ. ನಾಸ್ತಿಕ ವಿಚಾರಧಾರೆ ಇರುವವರು ಬರಗೂರು ರಾಮಚಂದ್ರಪ್ಪ, ಕಮ್ಯೂನಿಸ್ಟ್, ಇಸ್ಲಾಮಿನ ವಿಚಾರಧಾರೆಗಳನ್ನ ಪ್ರಚಾರ ಮಾಡೋದು ಬೇಡ. ಗೋ ಹತ್ಯೆ ವಿಚಾರವಾಗಿ ಅಧಿವೇಶನದಲ್ಲಿ ಸರ್ಕಾರ ಯಾವ ನಿಲುವು ಕೈಗೊಳ್ಳೊತ್ತೋ ಕಾದು ನೋಡೋಣ? ಒಂದು ವೇಳೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ. ಅಧಿವೇಶನದಲ್ಲಿ ಒಪ್ಪಿಗೆ ಪಡೆದರೂ ಅಂತಿಮ ಅಂಕಿತ ಹಾಕೋದು ರಾಜ್ಯಪಾಲರು. ಆದ್ದರಿಂದ ರಾಜ್ಯಪಾಲರಿಗೆ ಮನವಿ ಮಾಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

Share This Article