ಬೆಂಗಳೂರು: ನಾವೇನು ಅಧಿಕಾರ ಬೇಕೆಂದು ಯಾರ ಮನೆ ಬಳಿಯೂ ಹೋಗಿಲ್ಲ. ನೀವು ಸಿಎಂ ಆಗಿ ಎಂದು ಕಾಂಗ್ರೆಸ್ಸಿಗರು ದೇವೇಗೌಡರ ಮನೆ ಬಳಿ ಬಂದಿದ್ದರು. ಬೇಷರತ್ ಬೆಂಬಲ ಎಂದು ಓಡಿ ಬಂದಿದ್ದ ಕಾಂಗ್ರೆಸ್ ನವರು ಈಗ ಉಲ್ಟಾ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಸಚಿವ ಸಿ.ಎಸ್.ಪುಟ್ಟರಾಜು ಕೈ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ರಾಜೀನಾಮೆ ಹೇಳಿಕೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು. ರಾಜೀನಾಮೆ ಕೊಡಲು ಸಿದ್ಧ ಎಂದು ಸಿಎಂ ಹೇಳಬೇಕಾದರೆ ಎಷ್ಟು ನೋವಿದೆ ಅವರಿಗೆ ಎಂದು ಜನರೇ ಗಮನಿಸಲಿ. ಬಿಜೆಪಿ ಜೊತೆ ನಡೆಸಿದ ಆ 20 ತಿಂಗಳ ಅಧಿಕಾರ ಇಡೀ ರಾಜ್ಯದ ಜನತೆಯೇ ಮೆಚ್ಚುವಂತಿತ್ತು. ಈಗ ಹೆಜ್ಜೆಹೆಜ್ಜೆಗೂ ತಕರಾರು. ನಮ್ಮ ಪ್ರತಿ ರಕ್ತದ ಕಣದಲ್ಲೂ ಎಚ್ ಡಿಕೆ ಸಿಎಂ, ದೇವೇಗೌಡರು ನಮ್ಮ ಮೇರು ನಾಯಕರಾಗಿರುತ್ತಾರೆ. ಕಾಂಗ್ರೆಸ್ ನವರು ಇದೇ ರೀತಿ ಮಾತು ಮುಂದುವರಿಸಿದರೆ ಮುಂದಿನ ಪರಿಣಾಮ ಬೇರೆಯೇ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ರು.
2006-07 ರಲ್ಲಿ ಬಿಜೆಪಿಯ ಜೊತೆ ಸೇರಿ ಸರ್ಕಾರ ನಡೆಸಿದ್ದೇ ಚೆನ್ನಾಗಿತ್ತು. ಅಂದು ಎಚ್ ಡಿ ಕುಮಾರಸ್ವಾಮಿಯವರು ಒಳ್ಳೆಯ ಆಡಳಿತ ನಡೆಸಿ ಮೆಚ್ಚುಗೆ ಪಡೆದಿದ್ದರು. ಯಾರಿಂದ ಬೆರಳು ತೋರಿಸಿಕೊಳ್ಳದೇ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದ್ದರು. ಈಗ ಕಾಂಗ್ರೆಸ್ ನವರಿಂದ ಬರೀ ತಕರಾರು ಎಂದು ಸಚಿವರು ತಮ್ಮ ಆಕ್ರೋಶ ಹೊರಹಾಕಿದ್ರು.
ರಾಜೀನಾಮೆ ನೀಡುವ ಕುರಿತು ಸಿಎಂ ಎಚ್ಡಿಕೆ ಹೇಳಿಕೆ ಹಿನ್ನೆಲೆಯಲ್ಲಿ ಇನ್ಮುಂದೆಯಾದರೂ ಕಾಂಗ್ರೆಸ್ಸಿನವರು ಸರಿ ಹೋಗಲಿಲ್ಲ ಅಂದರೆ ಸಿಎಂ ಏನ್ ಹೇಳಿದ್ದಾರೋ ಅದರ ಬಗ್ಗೆ ತೀರ್ಮಾನ ಆಗುತ್ತೆ ಎಂದು ತಿಳಿಸಿದರು.
https://www.youtube.com/watch?v=8ldpuc1F85w
https://www.youtube.com/watch?v=OflAzK4wALY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv