ರಾಯಚೂರು: ಬಿಜೆಪಿಯವರು (BJP) ಸೋಲಿನಿಂದ ಸಂಪೂರ್ಣವಾಗಿ ಹತಾಶರಾಗಿದ್ದಾರೆ. ಅವರಿಗೆ ಜನರ ಬಳಿ ಹೋಗಲು ಮುಖ ಇಲ್ಲಾ. ಅವರ ಹತ್ತಿರ ಯಾವುದೇ ವಿಷಯಗಳಿಲ್ಲಾ. ಅದಕ್ಕೆ ಏನೋ ಒಂದು ಹುಡುಕಿಕೊಂಡು ಜನರ ಬಳಿ ಹೋಗಲು ಪ್ರಯತ್ನಿಸುತ್ತಿದ್ದಾರೆ. ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ (Sharanprakash Patil) ಹೇಳಿದ್ದಾರೆ.
ಸಚಿವರ ಹೆಸರು ಹೇಳಿ ಕಲಬುರಗಿಯ (Kalaburagi) ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದ ಕುರಿತು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ರಾಯಚೂರಿನಲ್ಲಿ ಮಾತನಾಡಿದ ಅವರು, ಯಾರೋ ಒಬ್ಬರ ಹೇಳಿಕೆ ಕೊಟ್ಟು ಈ ರೀತಿಯಾಗಿದೆ ಎಂದು ಬಿಜೆಪಿ ಒತ್ತಾಯಿಸುತ್ತಿದೆ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ರಾಜೀನಾಮೆ ಪಡೆಯಿರಿ, ಇಲ್ಲದಿದ್ದರೆ ಕ್ಯಾಬಿನೆಟ್‌ನಿಂದ ವಜಾ ಮಾಡಿ: ಈಶ್ವರಪ್ಪ
ಆ ವ್ಯಕ್ತಿಯನ್ನು ನಾನು ಒಂದು ಸಾರಿನೂ ನೋಡಿಲ್ಲ. ಅವರ ಜೊತೆ ಮಾತನಾಡಿಯೂ ಇಲ್ಲಾ. ಅವರೂ ನನ್ನ ಜೊತೆ ಮಾತನಾಡಿಲ್ಲ. ಅವರ ಮನೆಯವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಎಷ್ಟು ಪಾರದರ್ಶಕವಾಗಿದೆ ಅಂದರೆ ಕೂಡಲೇ ಪ್ರಕರಣ ಸಿಒಡಿ ತನಿಖೆಗೆ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ – ತುಟ್ಟಿ ಭತ್ಯೆ ಶೇ. 3.75 ಹೆಚ್ಚಳ
ನನ್ನ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಯಾವುದೇ ಪೈಪೋಟಿಯಿಲ್ಲ. ಕ್ಷೇತ್ರದಲ್ಲಿ 43 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೇನೆ. 2004ರಿಂದ ಶಾಸಕನಾಗಿದ್ದೇನೆ. ನನ್ನ ವಿರುದ್ಧ ಯಾರಿದ್ದಾರೆ ಅನ್ನೋದನ್ನು ತಿಳಿಯಲು ಹೋಗಿಲ್ಲ. ಬಿಜೆಪಿಯವರು ರಾಜಕೀಯ ಪ್ರೇರಿತರಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್
Web Stories